
ಫತೇಪುರ: ಇಲ್ಲಿನ ಜಹಾನಾಬಾದ್ ನಿವಾಸಿಯಾಗಿರುವ 16ರ ಹರೆಯದ ಹುಡುಗಿಯೊಬ್ಬಳು ಇಬ್ಬರು ಕಾಮುಕ ತರುಣರ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಡುಗಿಗೆ ಕಿರುಕುಳ ಕೊಟ್ಟ ಇಬ್ಬರೂ ತರುಣರನ್ನು ಪೊಲೀಸರು ಬಂಧಿಸಿರುವುದಾಗಿ ಎಸ್‌ಪಿ ಶ್ರೀಪರ್ಣ ಗಂಗೂಲಿ ತಿಳಿಸಿದ್ದಾರೆ.
ಈ ಕಾಮುಕ ತರುಣರಿಬ್ಬರ ಚುಡಾವಣೆ ಮತ್ತು ಕಿರುಕುಳದಿಂದ ಬೇಸತ್ತ ಹುಡುಗಿಯು ಎರಡು ವರ್ಷಗಳ ಹಿಂದೆಯೇ ತನ್ನ ಓದನ್ನು ನಿಲ್ಲಿಸಿದ್ದಳು. ಆದರೆ ಆ ತರುಣರು ತಮ್ಮ ಮನೆಯ ಮಂದೆಯೇ ಅಂಗಡಿಯೊಂದನ್ನು ಇಟ್ಟುಕೊಂಡ ಬಳಿಕ ತಮ್ಮ ಮಗಳ ಮೇಲಿನ ಕಿರುಕುಳ ಹೆಚ್ಚತೊಡಗಿತು. ಎರಡು ದಿನಗಳ ಹಿಂದೆ ತಮ್ಮ ಮಗಳು ಶೌಚಕ್ಕೆಂದು ಮನೆ ಹೊರಗೆ ಹೋಗಿದ್ದಾಗ ಆ ತರುಣರು ಆಕೆಯ ಅತ್ಯಾಚಾರಕ್ಕೆ ಯತ್ನಿಸಿದರು. ಇದರಿಂದ ಬೇಸತ್ತ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಳು ಎಂದು ಹುಡುಗಿಯ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದರು.
ಪೊಲೀಸರು ಆ ಪ್ರಕಾರ ಆರೋಪಿ ತರುಣರಿಬ್ಬರನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ಹುಡುಗಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗಂಗೂಲಿ ತಿಳಿಸಿದರು.
-ಉದಯವಾಣಿ
Comments are closed.