
ಗದಗ: ಹನಿ ಕೇಕ್ ತಿಂದು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಹತ್ತು ಮಂದಿ ಅಸ್ವಸ್ಥರಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಉಮೇಶ ವಡ್ಡರ್ ಎಂಬುವರ ಕುಟುಂಬದವರು ಅಸ್ವಸ್ಥರಾಗಿದ್ದಾರೆ. 19 ವರ್ಷದ ಯುವತಿ ಸೇರಿ ಎಲ್ಲರೂ 2 ರಿಂದ 14 ವಯಸ್ಸಿನ ಮಕ್ಕಳು. ತನು(2), ಅಶ್ವಿನಿ(2), ಜಯಶ್ರೀ(3), ಸಪ್ನ(4), ನೀಲವ್ವ(6), ಸುವರ್ಣ(7), ನೇತ್ರಾ(9), ಷಣ್ಮುಖ(14), ಉಡಚವ್ವ(19) ಹಾಗೂ ಪ್ರವೀಣ(4) ಎಂಬುವವರು ಅಸ್ವಸ್ಥಗೊಂಡಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಲಕ್ಷ್ಮೀ ವೆಂಕಟೇಶ ಅಯ್ಯಂಗಾರ್ ಬೇಕರಿಯಿಂದ ನಿನ್ನೆ ರಾತ್ರಿ ಹನಿ ಕೇಕ್ ತಂದು ತಿಂದು ಮಲಗಿದ್ದರು. ತಿಂದವರಿಗೆಲ್ಲಾ ಮಧ್ಯೆ ರಾತ್ರಿಯಲ್ಲಿ ವಾಂತಿ ಭೇದಿ ಉಂಟಾಗಿದೆ. ನಸುಕಿನ ಜಾವದಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಲಾಗಿದೆ.
ಈ ವೇಳೆ ತೀವ್ರ ವಾಂತಿ ಭೇದಿಯಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳು ಕಣ್ಣೀರಿಟ್ಟರು. ಅಸ್ವಸ್ಥ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Comments are closed.