ಮನೋರಂಜನೆ

ವರ್ಮಾ GOD, SEX and TRUTH ಟ್ರೈಲರ್ ಬಿಡುಗಡೆ

Pinterest LinkedIn Tumblr


ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ತಮ್ಮ ‘ಜಿಎಸ್‍ಟಿ’ (ಗಾಡ್, ಸೆಕ್ಸ್ ಅಂಡ್ ಟ್ರೂತ್) ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿದ್ದಾರೆ. ಅಮೆರಿಕದ ಪೋರ್ನ್ ಸ್ಟಾರ್ ಮಿಯಾ ಮಾಲ್ಕೋವಾ ಈ ಚಿತ್ರದಲ್ಲಿ ಅಭಿನಯಿಸಿದ್ದು ಈ ಚಿತ್ರಕ್ಕೆ ಸಂಬಂಧಿಸಿದ ಫೋಟೋಗಳನ್ನು ರಿಲೀಸ್ ಮಾಡಿ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ವರ್ಮಾ.

ಇದೀಗ ರಾಮ್ ಗೋಪಾಲ್ ವರ್ಮಾ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮಿಯಾ ಮಾಲ್ಕೋವಾರನ್ನು ಇನ್ನೊಂದು ಕೋನದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಸಂಪೂರ್ಣ ವೀಡಿಯೋವನ್ನು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಆ ವೀಡಿಯೋಗೆ ಸಂಬಂಧಿಸಿದಂತೆ ಒಂದಷ್ಟು ವಿವರಗಳನ್ನೂ ರಾಮ್ ಗೋಪಾಲ್ ವರ್ಮಾ ಬಹಿರಂಗಪಡಿಸಿದ್ದಾರೆ. ಈ ಸಿನಿಮಾಗೆ ಎಂ ಎಂ ಕ್ರೀಮ್ (ಎಂ ಎಂ ಕೀರವಾಣಿ) ಸಂಗೀತ ನಿರ್ದೇಶನ ನೀಡಿದ್ದಾರೆ. ಈ ಹಿಂದೆ ವರ್ಮಾ ನಿರ್ದೇಶನದ ‘ಕ್ಷಣ ಕ್ಷಣಂ’ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದರು. ಸುಮಾರು 25 ವರ್ಷಗಳ ಬಳಿಕ ಕೀರವಾಣಿ ಜತೆ ಮತ್ತೆ ಸಂಗೀತ ಸಂಯೋಜಿಸುತ್ತಿದ್ದಾರೆ.

Comments are closed.