
ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧ ರನೌಟ್ ಆಗುವ ಮೂಲಕ ಟ್ವೀಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ದಿನದ ಆರಂಭದಲ್ಲಿ ನಿರ್ಲಕ್ಷ್ಯದಿಂದ ರನೌಟ್ ಆದರು. 6ನೇ ವಿಕೆಟ್ ಗೆ ಕೊಹ್ಲಿ ಮತ್ತು ಪಾಂಡ್ಯ ಜತೆಯಾಗಿ 45 ರನ್ ಗಳಿಸಿದ್ದರು. ಈ ಜೋಡಿ ದೊಡ್ಡ ಮೊತ್ತ ಕಲೆಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ತಲುಪುವಲ್ಲಿ ಮಾಡಿಕೊಂಡ ಎಡವಟ್ಟು ಟೀಂ ಇಂಡಿಯಾದ ಅಭಿಮಾನಿಗಳಿಗೆ ಆಘಾತ ತಂದಿತ್ತು. ಇದರಿಂದಾಗಿ ಸಹನೆ ಕಳೆದುಕೊಂಡು ಟ್ವೀಟರಿಗರು ಪಾಂಡ್ಯ ವಿರುದ್ಧ ಹಾಸ್ಯ ಚಟಾಕಿ ಹರಿಸಿದ್ದಾರೆ.
Comments are closed.