
2012ರಲ್ಲಿ ತೆರೆಕಂಡಿದ್ದ ಬಾಲಿವುಡ್‌ನ ‘ಇಷ್ಕ್‌ಜಾದೆ’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಚಾರು ರೋಹಟ್ಗಿ (48) ಹೃದಯಾಘಾತದಿಂದ ಜ.15ರಂದು ನಿಧನರಾಗಿದ್ದಾರೆ. ಇಷ್ಕ್‌ಜಾದೆ ಚಿತ್ರದಲ್ಲಿ ಅವರು ನಟಿ ಪರಿಣೀತಿ ಚೋಪ್ರಾ ಅವರಿಗೆ ತಾಯಿಯಾಗಿ ಅಭಿನಯಿಸಿದ್ದರು.
ಸಾಕಷ್ಟು ಬಿಝಿಯಾಗಿದ್ದ ಇವರು ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದ್ದು ಒಮ್ಮೊಮ್ಮೆ ಮುಂಜಾನೆ 3 ಗಂಟೆ ತನಕ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು ಎನ್ನುತ್ತವೆ ಮೂಲಗಳು. ರೋಹಟ್ಗಿ ನಿಧನದ ಬಗ್ಗೆ ಪರಿಣೀತಿ ಚೋಪ್ರಾ ಟ್ವೀಟ್ ಮಾಡಿ ತಮ್ಮ ಸಂತಾಪ ಸೂಚಿಸಿದ್ದಾರೆ.
‘ಇಷ್ಕ್‌ಜಾದೆ ಚಿತ್ರದಲ್ಲಿ ಪ್ರೀತಿಯ ತಾಯಿಯಾಗಿ ಅಭಿನಯಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದೇ ಅದ್ಭುತ ಅನುಭವ’ ಎಂದಿದ್ದಾರೆ. ಇಷ್ಕ್‌ಜಾದೆ ಚಿತ್ರ ಅರ್ಜುನ್ ಕಪೂರ್ ಅಭಿನಯದ ಚೊಚ್ಚಲ ಚಿತ್ರವಾಗಿತ್ತು. ರೋಹಟ್ಗಿ ಅವರು 15 ಪಾರ್ಕ್ ಅವೆನ್ಯೂ, ಸೆಕೆಂಡ್ ಮ್ಯಾರೇಜ್ ಡಾಟ್ ಕಾಮ್ ಹಾಗೂ 1920 ಲಂಡನ್ ಸೇರಿದಂತೆ ಕೆಲವು ಟಿವಿ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
Comments are closed.