ಕರಾವಳಿ

ಕೂಳೂರು ಸೇತುವೆಯ ತಡೆಗೋಡೆಗೆ ಬಸ್ ಢಿಕ್ಕಿ : ಕೂದಲೆಲೆ ಅಂತರದಲ್ಲಿ ಪ್ರಯಾಣಿಕರು ಪಾರು

Pinterest LinkedIn Tumblr

ಮಂಗಳೂರು, ಜನವರಿ.15: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಣಂಬೂರ್ ಸಮೀಪದ ಕೂಳೂರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಅಪಾಯಕಾರಿಯಾಗಿ ನಿಂತ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯಿಂದ ಪಾರಾಗಿದ್ದಾರೆ.

ಸುರತ್ಕಲ್ ಕಡೆಯಿಂದ ಸ್ಟೇಟ್ ಬ್ಯಾಕ್ ಕಡೆಗೆ ಸಾಗುತ್ತಿದ್ದ 59 ರೂಟ್ ನಂಬರಿನ ಅವೆಮರಿಯಾ ಹೆಸರಿನ ಖಾಸಗಿ ಬಸ್ ಸೇತುವೆಯ ಮೇಲೆ ಚಲಿಸುತ್ತಿದ್ದ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.

ಬಸ್ ಸೇತುವೆಗೆ ಢಿಕ್ಕಿ ಹೊಡೆದ ರಭಸಕ್ಕೆ ಸೇತುವೆ ತಡೆಗೋಡೆ ಮುರಿದಿದ್ದು, ಬಸ್ ಅರ್ಧಭಾಗ ಸೇತುವೆಯಿಂದ ಹೊರನುಗ್ಗಿದೆ ನಿಂತಿದೆ. ಈ ಸಂದರ್ಭ ಅಬ್ಸ್ ಪ್ರಯಾಣಿಕರಿಂದ ತುಂಬಿದ್ದು, ಸಂಭಾವ್ಯ ಭಾರೀ ಅಪಾಯದಿಂದ ಪಾರಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಆದರೆ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತ್ವರಿತ ಕಾರ್ಯಾಚರಣೆ ಮೂಲಕ ಕ್ರೇನ್ ಬಳಸಿ ಬಸ್ಸನ್ನು ರಸ್ತೆಗೆ ತಂದಿದ್ದಾರೆ. ಘಟನೆ ಬಗ್ಗೆ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Comments are closed.