ಕರ್ನಾಟಕ

ಭೀಕರ ಅಪಘಾತ: ಹಿರಿಯ ಪತ್ರಕರ್ತ ಡಾ.ವಿರೇಶ ಹಿರೇಮಠ ದುರ್ಮರಣ

Pinterest LinkedIn Tumblr


ಬೆಳಗಾವಿ: ಜಿಲ್ಲೆಯ ನಂದಗಡ ಬಳಿ ಶನಿವಾರ ತಡರಾತ್ರಿ ಕಾರು ಮರಕ್ಕೆ ಗುದ್ದಿ ಸಂಭವಿಸಿದ ಭೀಕರ ಅವಘಡದಲ್ಲಿ ಹಿರಿಯ ಪತ್ರಕರ್ತ ಡಾ ವಿರೇಶ ಹಿರೇಮಠ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ದುರ್ಘ‌ಟನೆಯ ವೇಳೆ ಕಾರಿನಲ್ಲಿದ್ದ ಪತ್ನಿ ಗೌರಿ ಮತ್ತು ಕಾರು ಚಾಲಕ ಸುನೀಲ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ಬಾಗಕೋಟೆಗೆ ಹಿಂದಿರುಗುವಾಗ ಘಟನೆ ನಡೆದಿದೆ.

ವಿರೇಶ ಹಿರೇಮಠ ಸದ್ಯ ಬಾಗಲಕೋಟೆ ಬಿವಿವಿ ಕಾಲೇಜಿನಲ್ಲಿ ಪತ್ರಿಕೊಧ್ಯಮ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.

ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.