
ಆಗಾಗ ಸಿನಿಮಾ ಬಿಟ್ಟು ಬೇರೆ ವಿಚಾರಗಳಿಗಾಗಿ ಸುದ್ದಿ ಮಾಡುವ ಹುಚ್ಚ ವೆಂಕಟ್, ಇದೀಗ ತಮ್ಮ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಇಷ್ಟು ದಿನ ಲಾಂಗು ಮಚ್ಚು ಹಿಡಿಯುವ ಪಾತ್ರಗಳನ್ನು ಮಾಡಿರುವ ಹುಚ್ಚ ವೆಂಕಟ್ ಇದೀಗ ಪತ್ರಕರ್ತನಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.
ಹುಚ್ಚ ವೆಂಕಟ್ ಪತ್ರಕರ್ತನಾಗಿ ಅಭಿನಯಿಸುತ್ತಿರುವ ಡಿಕ್ಟೇಟರ್ ಸಿನಿಮಾದ ಹಾಡಿನ ಚಿತ್ರೀಕರಣ ಕೊಡುಗು ಜಿಲ್ಲೆಯ ಮಡಿಕೇರಿಯಲ್ಲಿ ಭರದಿಂದ ಸಾಗುತ್ತಿದೆ. ಹುಚ್ಚ ವೆಂಕಟ್‌ಗೆ ನಾಯಕಿಯಾಗಿ ಐಶ್ವರ್ಯಾ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಮೈಕ್ ಮತ್ತು ಕ್ಯಾಮೆರಾ ಹಿಡಿಯಲಿರುವ ಹುಚ್ಚ ವೆಂಕಟ್ ಮಾತನಾಡುತ್ತಾ, ‘ಮಾಧ್ಯಮದವರೂ ಪೊಲೀಸರಂತೆ ಕಾರ್ಯನಿರ್ವಹಿಸುತ್ತಾರೆ. ಆದರೆ ಮಾಧ್ಯಮದವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂತಹ ಸಮಸ್ಯೆಗಳನ್ನು ಸಮಾಜದ ಮುಂದಿಡುವ ಪ್ರಯತ್ನ’ ಎಂದರು.
ಆರಂಭದಿಂದಲೂ ಈ ಸಿನಿಮಾ ವಿವಾದ ಗೂಡಾಗಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಾಗಿದ್ದ ಎಸ್ ನಾರಾಯಣ್ ಅರ್ಧಕ್ಕೆ ಕೈಬಿಟ್ಟರು. ಬಳಿಕ ಈ ಸಿನಿಮಾದಲ್ಲಿ ನಾನೂ ಅಭಿನಯಿಸಲ್ಲ ಎಂದಿದ್ದರು ಹುಚ್ಚ ವೆಂಕಟ್.
Comments are closed.