ಮನೋರಂಜನೆ

ಬಾಡಿಗೆ ತಾಯಿಯಾದ ಐಶ್ವರ್ಯಾ ರೈ !!!

Pinterest LinkedIn Tumblr

ಬಾಲಿವುಡ್ ನಟಿ ಐಶ್ವರ್ಯಾ ರೈ ಹೊಸ ಸಿನಿಮಾವೊಂದರಲ್ಲಿ ಬಾಡಿಗೆ ತಾಯಿಯ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಜಾಸ್ಮಿನ್: ಸ್ಟೋರಿ ಆಫ್ ಎ ರಿಲೀಸ್‌ಡ್ ವೂಂಬ್ ಎಂಬ ಹೆಸರಿನ ಈ ಸಿನಿಮಾ ಗುಜರಾತ್‌ನ ಬಾಡಿಗೆ ತಾಯಿಯೊಬ್ಬರ ನೈಜ ಕಥೆಯನ್ನು ಹೊಂದಿದೆ.

ಯಾರಿಗಾಗಿಯೋ ಬಾಡಿಗೆ ತಾಯಿಯಾಗಲು ಒಪ್ಪುವ ಮಹಿಳೆ ನಂತರ ಆ ಮಗುವಿನೊಂದಿಗೆ ಭಾವನಾತ್ಮಕ ನಟು ಬೆಳೆಸಿಕೊಂಡು ಮಗುವನ್ನು ವಾಪಸ್ ತರಲು ಮಾಡುವ ಪ್ರಯತ್ನಗಳು ಈ ಚಿತ್ರದಲ್ಲಿವೆ.

ಈ ಪಾತ್ರದಲ್ಲಿ ಮೊದಲು ಅನುಷ್ಕಾ ಶರ್ಮಾ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಬಾಡಿಗೆ ತಾಯಿ ಪಾತ್ರಕ್ಕೆ ಐಶ್ವರ್ಯಾ ರೈ ಚೆನ್ನಾಗಿ ಸೂಟ್ ಆಗುತ್ತಾರೆ ಎಂದು ಚಿತ್ರತಂಡಕ್ಕೆ ಅನಿಸಿರುವ ಕಾರಣ, ತಂಡ ಐಶ್ವರ್ಯಾ ರೈಯನ್ನು ಸಂಪರ್ಕಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಆಫರ್‌ಗೆ ಐಶ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯಕ್ಕೆ ಅವರು ಫನ್ನಿಖಾನ್ ಸಿನಿಮಾದ ಶೂಟಿಂಗ್‍ನಲ್ಲಿ ಬಿಝಿಯಾಗಿದ್ದಾರೆ.

Comments are closed.