
ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಈ ಬಾರಿ ಯಾರು ಜಯ ಗಳಿಸುತ್ತಾರೆ ಎಂಬ ವಿಷಯದ ಬಗ್ಗೆ ಬಿರುಸಿನ ಚರ್ಚೆ ನಡೆಯಿತು.
ಕಿಚ್ಚ ಸುದೀಪ್ ಮುಂದೆ ಮನೆ ಮಂದಿ ಎಲ್ಲ ತಮ್ಮ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.
ಪ್ರತಿ ಶನಿವಾರ ಬಿಗ್ಬಾಸ್ ವೇದಿಕೆಯಲ್ಲಿ ನಡೆಯುವ ‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡಿನಲ್ಲಿ ಈ ಬಾರಿ ಯಾರು ಬಿಗ್ಬಾಸ್ ವಿನ್ನರ್ ಆಗುತ್ತಾರೆ ಎಂಬುದೇ ಮುಖ್ಯವಾಗಿ ಚರ್ಚೆಗೆ ಗ್ರಾಸವಾಯಿತು.

ವಾರವಿಡೀ ಸ್ಪರ್ಧಿಗಳು ಮಾಡಿದ ತಪ್ಪುಗಳನ್ನು ತಿದ್ದಿ, ತೀಡಿ ಬುದ್ಧಿವಾದ ಹೇಳುವುದರ ಜತೆಗೆ ಸಲಹೆಗಳನ್ನು ನೀಡುವ ಕೆಲಸ ಮಾಡುತ್ತಾರೆ ನಿರೂಪಕ ಸುದೀಪ್. ಈ ವಾರ ಕೂಡ ಈ ಕೆಲಸವನ್ನೇ ಮಾಡಿದ್ರು. ಆದರೆ, ಇದಕ್ಕಿಂತಲೂ ಮುಂಚೆ ಮಹತ್ತರವಾದ ವಿಷಯವನ್ನು ಕೈಗೆತ್ತಿಕೊಂಡರು.
ಬಿಗ್ಬಾಸ್ ಸೀಸನ್ ಫಿನಾಲೆಗೆ ಇನ್ನೂ ಮೂರು ವಾರಗಳು ಬಾಕಿ ಇರುವಾಗಲೇ ಈ ಬಾರಿ ಯಾರು ವಿನ್ ಆಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ನಿನ್ನೆಯ ಎಪಿಸೋಡಿನ ಪ್ರಾರಂಭದಲ್ಲಿ ಸುದೀಪ್ ಅವರು ಈ ಟಾಪಿಕಕ್ನ್ನೇ ಸ್ಪರ್ಧಿಗಳ ಮುಂದಿಟ್ಟರು. ಈ ಸೀಸನ್ನ ಟಾಪ್ 5 ಲಿಸ್ಟ್ನಲ್ಲಿ ಯಾರಿರುತ್ತಾರೆ, ಬಿಗ್ಬಾಸ್ ಯಾರ ವಿನ್ ಆಗುತ್ತಾರೆ ಎನ್ನುವ ಪ್ರಶ್ನೆಗಳನ್ನು ಪ್ರತಿ ಸ್ಪರ್ಧಿಗಳಿಗೆ ಕೇಳಿದರು ಕಿಚ್ಚ. ಈ ವೇಳೆ ಎಲ್ಲರ ಬಾಯಿಂದಲೂ ಕೇಳಿ ಬಂದ ಹೆಸರು ಚಂದನ್ ಅವರದು. ಎಲ್ಲರು ಕೂಡ ಚಂದನ್ ಅವರೇ ವಿನ್ ಆಗುತ್ತಾರೆ ಎಂದು ಹೇಳಿದರು.
ಇನ್ನು ಚಂದನ್ ಅವರನ್ನು ಹೊರತುಪಡಿಸಿ ಕೇಳಿಬಂದ ಹೆಸರು ಜೆಕೆ ಅವರದ್ದು. ಜೆಕೆ ಕೂಡ ಫೈನಲ್ ಲಿಸ್ಟ್ನಲ್ಲಿ ಇದ್ದು, ಕೆಲವರು ಅವರ ಹೆಸರನ್ನು ಪ್ರಸ್ತಾಪಿಸಿದರು.
Comments are closed.