
ಮಂಗಳೂರು ಜನವರಿ 5 : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ 7ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಬೆಳ್ತಂಗಡಿ, ಪುತ್ತೂರು ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 200 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಭಾನುವಾರ ಬೆಳಿಗ್ಗೆ 10.40ಕ್ಕೆ ಬೆಳ್ತಂಗಡಿಗೆ ಆಗಮಿಸುವ ಮುಖ್ಯಮಂತ್ರಿಗಳು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ಮಧ್ಯಾಹ್ನ 12.45 ಕ್ಕೆ ಬೆಳ್ತಂಗಡಿಯಿಂದ ಹೆಲಿಕಾಪ್ಟರ್ ಮೂಲಕ ಹೊರಟು 1.05 ಕ್ಕೆ ಪುತ್ತೂರು ಹೆಲಿಪ್ಯಾಡ್‍ಗೆ ಆಗಮಿಸುವರು. ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಮಧ್ಯಾಹ್ನ 3.45 ಕ್ಕೆ ಪುತ್ತೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಸಂಜೆ 4.05 ಕ್ಕೆ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ನಂತರ ಮಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿಗಳು, ಸಂಜೆ 7.30 ಕ್ಕೆ ಮಂಗಳೂರು ಕದ್ರಿಪಾರ್ಕ್‍ನಲ್ಲಿ ಸಂಗೀತ ಕಾರಂಜಿ ಮತ್ತು ಹೊಸದಾಗಿ ಅಳವಡಿಸಲಾಗಿರುವ ಪುಟಾಣಿ ರೈಲು ಸೇವೆಯ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಮುಖ್ಯಮಂತ್ರಿಗಳು ಸಕ್ರ್ಯೂಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಡಿಸೆಂಬರ್ 8 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಬೈಂದೂರಿಗೆ ತೆರಳಲಿದ್ದಾರೆ.
ಮುಖ್ಯಮಂತ್ರಿಗಳು ಚಾಲನೆ ನೀಡುವ ಅಭಿವೃದ್ಧಿ ಯೋಜನೆಗಳ ವಿವರ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ:
1. ಬೆಳ್ತಂಗಡಿ ನಗರಕ್ಕೆ ಸಮಗ್ರ ಕುಡಿಯುವ ನೀರು ಪೊರೈಕೆ ಯೋಜನೆ ಕಾಮಗಾರಿ ಉದ್ಘಾಟನೆ- ರೂ. 1300 ಲಕ್ಷ
2. ಬೆಳ್ತಂಗಡಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ- ರೂ. 800 ಲಕ್ಷ
3. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಇಂದಬೆಟ್ಟು ಗ್ರಾಮದ ಗುರಿಪಲ್ಲ ಬೊಲ್ಲಾಜೆ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 371.55 ಲಕ್ಷ
4. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪಾಲೇದು ಕುದ್ರಡ್ಕ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 313.40 ಲಕ್ಷ
5. ಬೆಳ್ತಂಗಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 1000 ಮೆ.ಟನ್ ಸಾಮಥ್ರ್ಯದ ಗೋದಾಮು ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ ಉದ್ಘಾಟನೆ- ರೂ. 179 ಲಕ್ಷ
6. ನಬಾರ್ಡ್ ಯೋಜನೆಯಡಿ ಬಂದಾರು ಗ್ರಾಮದ ಪುತ್ತಿಲ ಮೈರೊಲ್ತಡ್ಕ ರಸ್ತೆಯ ಪುತ್ತಿಲ ಎಂಬಲ್ಲಿ ಹೊಸ ಸೇತುವೆ ಉದ್ಘಾಟನೆ- ರೂ. 125 ಲಕ್ಷ
7. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗ ಕಚೇರಿ ಉದ್ಘಾಟನೆ– ರೂ. 100 ಲಕ್ಷ
8. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನೆರಿಯದ ಕೋಲೋಡಿ ಕೊಲ್ಮ ರಸ್ತೆಯಲ್ಲಿ 5 ಸೇತುವೆಗಳಿಗೆ ಶಿಲಾನ್ಯಾಸ – ರೂ. 74.40 ಲಕ್ಷ
9. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಗುಂಡೂರಿ ಅಂಗರಕೇರಿಯ ತುಂಬಿದಪಲ್ಕೆ ರಸ್ತೆಯಲ್ಲಿ ಸೇತುವೆ ಶಿಲಾನ್ಯಾಸ- ರೂ. 474.30 ಲಕ್ಷ
10. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಬಂದಾರು ಗ್ರಾಮದ ಬೋಲೋಡಿ ನೈರೋಲ್ತಡ್ಕ –ಗೋಳಿತ್ತಾಡಿ ರಸ್ತೆಯಲ್ಲಿ 2 ಸೇತುವೆ ಶಿಲಾನ್ಯಾಸ- ರೂ. 387.40 ಲಕ್ಷ
11. ಪುಂಜಾಲ್‍ಕಟ್ಟೆಯಲ್ಲಿ ಹೊಸ ಪೊಲೀಸ್ ವಸತಿಗೃಹ ಕಟ್ಟಡ ಶಿಲಾನ್ಯಾಸ- ರೂ. 235.92 ಲಕ್ಷ
12. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪಾಲೇದು ಕುದ್ರಡ್ಕ ರಸ್ತೆಯಲ್ಲಿ ಎರಡು ಸೇತುವೆ ಶಿಲಾನ್ಯಾಸ- ರೂ. 213.80 ಲಕ್ಷ
13. ಮುಖ್ಯಮಂತ್ರಿಗಳ ನಗರೋತ್ಥಾನ ಹಂತ -3 ರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ- ರೂ.200 ಲಕ್ಷ
14. ಬೆಳ್ತಂಗಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 250 ಮೆ. ಟನ್ ಸಾಮಥ್ರ್ಯದ ಹಾಗೂ 2 ಗೋದಾಮು ಕಟ್ಟಡ ನಿರ್ಮಾಣ ಹಾಗೂ ಮುಚ್ಚು ಹರಾಜು ಕಟ್ಟೆ ನಿರ್ಮಾಣ ಕಾಮಗಾರಿ ಶಿಲಾನ್ಯಾಸ- ರೂ. 120 ಲಕ್ಷ
15. ಲಾಯಿಲ ಗ್ರಾಮದ ರಾಘವೇಂದ್ರ ಮಠದ ಬಳಿ ಸೋಮಾವತಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ- ರೂ. 85 ಲಕ್ಷ
ಪುತ್ತೂರು ವಿಧಾನಸಭಾ ಕ್ಷೇತ್ರ:
1. ಪುತ್ತೂರು ನಗರದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ (ಮುನ್ಸಿಪಾಲಿಟಿ) ಹಂತ-3 ರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ- ರೂ. 2500 ಲಕ್ಷ
2. ವಿಟ್ಲ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ (ಮುನ್ಸಿಪಾಲಿಟಿ) ಹಂತ-3 ರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ – ರೂ. 500 ಲಕ್ಷ
3. ಪಡುಮಲೆ ಕೋಟಿ ಚೆನ್ನಯ ಜನ್ಮಭೂಮಿ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ- ರೂ. 500 ಲಕ್ಷ
4. ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕುಂಜೂರು ಪಂಜ ಅಪಘಾತ ವಲಯ ಎಂಬಲ್ಲಿ ಅಭಿವೃದ್ದಿಗೆ ಶಿಲಾನ್ಯಾಸ- ರೂ. 480 ಲಕ್ಷ
5. ಪುತ್ತೂರು-ಉಪ್ಪಿನಂಗಡಿ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 415ಲಕ್ಷ
6. ಪುತ್ತೂರು ವಿಧಾನಸಭಾ ವ್ಯಾಪ್ತಿಯ ಅಳಿಕೆ ಗ್ರಾಮದ ನೆಕ್ಕಿನ ಪುಣೆ ಬಳಿ ಸೀರೆ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ- ರೂ. 375 ಲಕ್ಷ
7. ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಅಟ್ಲಾರು ಎಂಬಲ್ಲಿ ಸೇತುವೆ ಉದ್ಘಾಟನೆ- ರೂ. 300 ಲಕ್ಷ
8. ನಿಡ್ಡಳ್ಳಿ ಪಾಣಾಜೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 275 ಲಕ್ಷ
9. ಪುತ್ತೂರಿನಲ್ಲಿ ಹೊಸ ನಿರೀಕ್ಷಣಾ ಮಂದಿರ(ಐಬಿ) ಉದ್ಘಾಟನೆ- ರೂ. 180 ಲಕ್ಷ
10. ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕಿಮೀ 65.20 ( ಮಂಜ ಎಂಬಲ್ಲಿ) ಮತ್ತು ಕಿಮೀ 69.80 (ಕುಪುಲ್ಟಾರ್ ಎಂಬಲ್ಲಿ) 2 ಸೇತುವೆಗಳ ನಿರ್ಮಾಣಕ್ಕೆ ಶಿಲಾನ್ಯಾಸ- ರೂ. 170 ಲಕ್ಷ
11. ಹಂಟ್ಯಾರು ಬೆಟ್ಟಂಪಾಡಿ ಜಿಲ್ಲಾ ಮುಖ್ಯ ರಸ್ತೆಯ ಕೊರಂಗಿಲ ಎಂಬಲ್ಲಿ ಸೇತುವೆ ಉದ್ಘಾಟನೆ- ರೂ.150 ಲಕ್ಷ
12. ನಬಾರ್ಡ್ ಯೋಜನೆಯಡಿ ನಿಡ್ಡಳ್ಳಿ ಪಾಣಾಜೆ ಜಿಲ್ಲಾ ಮುಖ್ಯ ರಸ್ತೆಯ ಬಳ್ಳಿಕಾನ ಎಂಬಲ್ಲಿ ಸೇತುವೆ ಉದ್ಘಾಟನೆ- ರೂ. 150 ಲಕ್ಷ
13. ನಬಾರ್ಡ್ ಯೋಜನೆಯಡಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕಿ.ಮೀ.80.60 (ಮಡಿಯಾಳ) ಸೇತುವೆ ಉದ್ಘಾಟನೆ- ರೂ. 120 ಲಕ್ಷ
14. ಅಮ್ಚಿನಡ್ಕ-ನೆಟ್ಟಾರು ಜಿಲ್ಲಾ ಮುಖ್ಯ ರಸ್ತೆಯ ಅಫಘಾತ ವಲಯ ಅಭಿವೃದ್ದಿ ಶಿಲಾನ್ಯಾಸ- ರೂ. 100 ಲಕ್ಷ
15. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಬಳಿಯಿಂದ ಜುಮ್ಮಾ ಮಸೀದಿಯವರೆಗೆ ತಡೆಗೋಡೆ ಉದ್ಘಾಟನೆ- ರೂ. 100 ಲಕ್ಷ
16. ಉಪ್ಪಿನಂಗಡಿಯಲ್ಲಿ ಹೊಸ ಪೊಲೀಸ್ ಸ್ಟೇಷನ್ ಕಟ್ಟಡ ಶಿಲಾನ್ಯಾಸ- ರೂ. 91 ಲಕ್ಷ
17. ನೆಲ್ಯಾಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ- ರೂ. 80 ಲಕ್ಷ
18. ಆರ್ಯಾಪು ಗ್ರಾಮದ ದೇವಸ್ಯ – ಚೇಲಡ್ಕ (1.378 ಕಿಮೀ)ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 50 ಲಕ್ಷ
19. ಕೋಡಿಂಬಾಡಿ ಗ್ರಾಮದ ಶಾಂತಿನಗರ – ಕರ್ವೇಲು (1.475 ಕಿಮೀ)ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 50 ಲಕ್ಷ
20. ಸರ್ವೇ ಭಕ್ತ ಕೋಡಿ ರೆಂಜಿಲಾಡಿ ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 50 ಲಕ್ಷ
21. ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಶ್ರೀಧಾಮ ( ಕೊರಗ ನಿವೇಶನಕ್ಕೆ ) ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 50 ಲಕ್ಷ
ಮೂಡಬಿದ್ರೆ ವಿಧಾನಸಭಾ ಕ್ಷೇತ್ರ:
1. ಮೂಡಬಿದ್ರೆ ಸ್ವರಾಜ್ ಮೈದಾನದ ಬಳಿ ವರ್ತುಲ ರಸ್ತೆ ( ರಿಂಗ್ ರೋಡ್) ಉದ್ಘಾಟನೆ ರೂ. 650 ಲಕ್ಷ
2. ಮೂಡಬಿದ್ರೆ ಹೊಸ್ಮಾರು ಜಿಲ್ಲಾ ಮುಖ್ಯ ರಸ್ತೆಯ ಮೂಡಬಿದ್ರೆಯಿಂದ ಶಿರ್ತಾಡಿ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 500 ಲಕ್ಷ
3. ಕುಪ್ಪೆಪದವು- ಇರುವೈಲು- ಮೂಡಬಿದ್ರೆ ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಉದ್ಘಾಟನೆ- ರೂ. 450 ಲಕ್ಷ
4. ಬೆಳ್ತಂಗಡಿ -ಮೂಡಬಿದ್ರೆ-ಮುಲ್ಕಿ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿ ಉದ್ಘಾಟನೆ- ರೂ. 400 ಲಕ್ಷ
5. ಬೆಳ್ತಂಗಡಿ-ಮೂಡಬಿದ್ರೆ-ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ಗಂಟಾಲ್ ಕಟ್ಟೆಯಿಂದ ಮೂಡಬಿದ್ರೆವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿ ಉದ್ಘಾಟನೆ- ರೂ. 400 ಲಕ್ಷ
6. ಬೆಳುವಾಯಿ ಅಳಿಯೂರು ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ಉದ್ಘಾಟನೆ- ರೂ. 300 ಲಕ್ಷ
7. ಬೈಲುಕೊಪ್ಪದಿಂದ ನಡಿಗುಡ್ಡೆ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 231.68 ಲಕ್ಷ
8. ಮಳವೂರು ಗ್ರಾಮ ಪಂಚಾಯತ್‍ನ ಹಳೆ ವಿಮಾನ ನಿಲ್ದಾಣದಿಂದ ಹೊಸ ವಿಮಾನ ನಿಲ್ದಾಣದ ಅಗ್ನಿಶಾಮಕ ತುರ್ತು ನಿರ್ಗಮನ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 190 ಲಕ್ಷ
9. ಕದಂಬರಗುತ್ತಿನಿಂದ ತಾಜ್‍ಮಹಲ್ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 175.79 ಲಕ್ಷ
10. ಹೊಸಬೆಟ್ಟು ಚರ್ಚ್ ಬಾವದಬೈಲ್ ನಿಂದ ಪುಚ್ಚಮೊಗರು ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 152.53
11. ಇರ್ವತ್ತೂರಿನಿಂದ ಮೂಡೆಕಾಡು ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 110.17 ಲಕ್ಷ
12. ಇರುವೈಲು ಗ್ರಾಮ ಪಂಚಾಯತ್‍ನ ಹೊಸ್ಮಾರು-ಪದವು ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 100 ಲಕ್ಷ
13. ಕಾಪಿಜಾಲ್ ಪರಿಶಿಷ್ಟ ಜಾತಿ ಕಾಲನಿಯಿಂದ ಆನೆಗುಡ್ಡೆ ಚರ್ಚ್ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 96.68 ಲಕ್ಷ
14. ಹಿದಾಯತ್ ನಗರದಿಂದ ತೋಡಾರು ಜಂಕ್ಷನ್‍ವರೆಗೆ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 94.82 ಲಕ್ಷ
15. ನಡ್ಯೋಡಿಯಿಂದ ಮರ್ಕೋತ್ತಪಲ್ಕೆ ರಸ್ತೆ ಅಭಿವೃದ್ದಿ ಉದ್ಘಾಟನೆ- ರೂ. 90.58 ಲಕ್ಷ
16. ಮೂಡಬಿದ್ರೆ ಮೆಸ್ಕಾಂ ಉಪ ವಿಭಾಗ ಕಚೇರಿ ಉದ್ಘಾಟನೆ- ರೂ. 75 ಲಕ್ಷ
17. ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ಬಸದಿ ಕೆರೆ ನವೀಕರಣ ಕಾಮಗಾರಿ ಉದ್ಘಾಟನೆ- ರೂ. 48.50 ಲಕ್ಷ
18. ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ಗಾಂಧಿಪಾರ್ಕ್ ಎಂಬಲ್ಲಿ ಹೊಸ ಸ್ಕೇಟಿಂಗ್ ರಿಂಕ್ ಉದ್ಘಾಟನೆ- ರೂ. 25 ಲಕ್ಷ
19. ಮುಲ್ಕಿ ನಗರ ಪಂಚಾಯತ್ ಸಮಗ್ರ ಕುಡಿಯುವ ನೀರಿನ ಪೂರೈಕೆ ಉನ್ನತೀಕರಣ ಕಾಮಗಾರಿಗೆ ಶಿಲಾನ್ಯಾಸ- ರೂ. 1492 ಲಕ್ಷ
20. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಹಂತ-3 ರ ಕಾಮಗಾರಿಗಳಿಗೆ ಶಿಲಾನ್ಯಾಸ- ರೂ. 469 ಲಕ್ಷ
21. ಶಿರ್ತಾಡಿಯಿಂದ ಹೊಸ್ಮಾರುವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಶಿಲಾನ್ಯಾಸ – ರೂ. 405 ಲಕ್ಷ
22. ಗ್ರಾಮವಿಕಾಸ ಯೋಜನೆಯಡಿ ಕಡಂದಲೆ, ಬಡಗಮಿಜಾರು, ತಾಳಿಪಾಡಿ ಮತ್ತು ಜೋಕಟ್ಟೆ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ- ರೂ. 400 ಲಕ್ಷ
23. ಪಿಲಿಕುಲ ನಿಸರ್ಗಧಾಮದೊಳಗೆ ವಿವಿಧ ರಸ್ತೆ ಅಭಿವೃದ್ದಿ ಶಿಲಾನ್ಯಾಸ- ರೂ. 200 ಲಕ್ಷ
24. ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಶಿಲಾನ್ಯಾಸ – ರೂ. 200 ಲಕ್ಷ
25. ಮೂಡಬಿದ್ರೆ ಸಾವಿರ ಕಂಬದ ಬಸದಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಶಿಲಾನ್ಯಾಸ- ರೂ. 170ಲಕ್ಷ
26. ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿ ಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ಶಿಲಾನ್ಯಾಸ- ರೂ. 150 ಲಕ್ಷ
27. ಮಕ್ಕಿ ಮಾಂಟ್ರಾಡಿ ರಸ್ತೆ ಮತ್ತು ಸೇತುವೆ ಅಭಿವೃದ್ದಿ ಶಿಲಾನ್ಯಾಸ- ರೂ. 108. ಲಕ್ಷ
28. ಶಿರ್ತಾಡಿ ಮಾಂಟ್ರಾಡಿ ಗ್ರಾಮೀಣ ರಸ್ತೆಯ ಅಭಿವೃದ್ದಿ ಶಿಲಾನ್ಯಾಸ- ರೂ. 100 ಲಕ್ಷ
29. ಇರುವೈಲ್ ಬರ್ದಿಲ ಕಂಡೊಟ್ಟು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ದಿ ಶಿಲಾನ್ಯಾಸ – ರೂ. 63.50 ಲಕ್ಷ
30. ಧರೆಗುಡ್ಡೆ ಉರಿಯಾಲ ಎಂಬಲ್ಲಿ ಕಿಂಡಿ ಅಣೆಕಟ್ಟು ರಚನೆ ಶಿಲಾನ್ಯಾಸ- ರೂ. 50ಲಕ್ಷ
31. ಮೂಡಬಿದ್ರೆಯಲ್ಲಿ ಹೊಸ ರೈತ ಸಂಪರ್ಕ ಕೇಂದ್ರ ಶಿಲಾನ್ಯಾಸ- ರೂ. 46 ಲಕ್ಷ.
Comments are closed.