ಅಂತರಾಷ್ಟ್ರೀಯ

ಜಗತ್ತಿನ ಅತಿ ದುಬಾರಿ ವೋಡ್ಕಾ ಬಾಟಲಿ ಕಳವು

Pinterest LinkedIn Tumblr


ಜಗತ್ತಿನ ಅತಿ ದುಬಾರಿ ವೋಡ್ಕಾ ಬಾಟಲಿಯ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 9 ಕೋಟಿ ರೂ.ಗಳು. ಈ ಬಾಟಲಿ ಇದ್ದದ್ದು ಡೆನ್ಮಾರ್ಕ್‌ನ ಕೊಪೆನ್‌ಹೆಗೆನ್‌ನ “ಕೆಫೆ 33′ ಬಾರ್‌ನಲ್ಲಿ. ಈ ಎಲ್ಲಾ
ವಿಷಯಗಳು ಈಗ ಬಹಿರಂಗವಾಗಲು ಕಾರಣವಿದೆ. ಜಗತ್ತಿನ ದುಬಾರಿ ವೋಡ್ಕಾ ಬಾಟಲಿ ಈಗ ಈ ಬಾರ್‌ನಿಂದ ಕಳವಾಗಿದೆ.

ಈ ಬಾಟಲಿಯನ್ನು 3 ಕೆ.ಜಿ ಚಿನ್ನ, 3 ಕೆ.ಜಿ ಬೆಳ್ಳಿ ಬಳಸಿ ತಯಾರಿಸಲಾಗಿದೆ. ಇದಕ್ಕೆ ಬಳಸಿರುವ ಲೆದರ್‌ ಸ್ಟ್ರಾಪ್‌ ಅನ್ನು 1912ರ ಮಾಂಟ್‌ ಕಾರ್ಲೊ ರ್ಯಾಲಿ ಕಾರ್‌ನಿಂದ ಪಡೆಯಲಾಗಿದೆ. ನನ್ನ ಬಾರಿನ
ಮ್ಯೂಸಿಯಂನಲ್ಲಿ ಈ ವೋಡ್ಕಾ ಬಾಟಲಿ ವಿಶೇಷ ಆಕರ್ಷಣೆಯಾಗಿತ್ತು ಎಂದಿದ್ದಾರೆ ಬಾರ್‌ ಮಾಲೀಕ
ಬ್ರಿಯಾನ್‌ ಇಂಗ್‌ಬರ್ಗ್‌.

-ಉದಯವಾಣಿ

Comments are closed.