
ಮಡಮಕ್ಕಿ ಸಿನಿಮಾದ ನಾಯಕ ತನುಷ್ ಈಗ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1989ರಲ್ಲಿ ತೆರೆ ಕಂಡ ನಂಜುಂಡಿ ಕಲ್ಯಾಣ ಸಿನಿಮಾದ ಶೀರ್ಷಿಕೆಯು 28 ವರ್ಷಗಳ ಬಳಿಕ ಬಳಕೆಯಾಗುತ್ತಿದೆ.
ಇದು ರಾಜೇಂದ್ರ ಕಾರಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು, ಕ್ಲೈಮಾಕ್ಸ್ ಭಾಗದ 20 ನಿಮಿಷವು ಪ್ರೇಕ್ಷ ಕರ ಮನಸ್ಸನ್ನು ಕೆದಕಿ ಕಣ್ಣಾಲಿಗಳು ಒದ್ದೆಯಾಗುತ್ತವೆಯಂತೆ. ಹಠಮಾರಿ ತಾಯಿಯ ಮನಸ್ಸನ್ನು ಪರಿವರ್ತಿಸಿ ಪ್ರೀತಿಸಿದ ಹುಡುಗಿಯನ್ನು ಹೇಗೆ ಮದುವೆಯಾಗುತ್ತಾನೆ ಎಂಬುದು ಸಿನಿಮಾದ ಸ್ಟೋರಿ.
ತನುಷ್ ನಾಯಕನಾಗಿ ಕಾಣಿಸಿಕೊಂಡಿದ್ದರೆ ಶ್ರಾವ್ಯ ನಾಯಕಿ. ಮಂಜುನಾಥ ಹೆಗಡೆ, ಪದ್ಮಜಾ ರಾವ್ ಮತ್ತು ಕುರಿ ಪ್ರತಾಪ್ ತಾರಾಗಣದಲ್ಲಿ ಇದ್ದಾರೆ. ಕಾಮಿಡಿ ದೃಶ್ಯಗಳನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಶ್ರಾವ್ಯ ಈ ಸಿನಿಮಾದಲ್ಲಿ ಮಧ್ಯಮವರ್ಗದ ಮಗಳಾಗಿ ಕಾಣಿಸಿಕೊಂಡಿದ್ದಾರೆ.
Comments are closed.