
ಬೆಂಗಳೂರು: ಬಿಗ್‌ಬಾಸ್ ಸೀಸನ್‌ಗೆ ಬರುವ ಸ್ಪರ್ಧಿಗಳು ಒಂದಿಲ್ಲೊಂದು ಆಸೆಗಳನ್ನು, ಕನಸುಗಳನ್ನು ಕಟ್ಟಿಕೊಂಡು ಬಂದಿರುತ್ತಾರೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಶ್ರಮಪಟ್ಟು ದುಡಿಯುತ್ತಾರೆ.
ಈ ಸೀಸನ್‌ನ ಸಾಮಾನ್ಯ ಸ್ಪರ್ಧಿಯಾಗಿರುವ ರಿಯಾಜ್ ಮಹತ್ತರವಾದ ಉದ್ದೇಶದೊಂದಿಗೆ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಜತೆಗೆ ಅದನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಶ್ರಮವಹಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಗೆ ತಾವು ಏಕೆ ಬಂದಿದ್ದು ಎನ್ನುವ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ ರಿಯಾಜ್.
ನಿನ್ನೆಯ ಎಪಿಸೋಡಿನಲ್ಲಿ ಸಮೀರ್ ಆಚಾರ್ಯ ಜೊತೆ ಮಾತಿಗಿಳಿದಿದ್ದ ರಿಯಾಜ್, ತಮ್ಮ ಮನದ ಮಾತನ್ನು ಹೇಳಿದ್ರು. ಬಿಗ್‌ಬಾಸ್ ಸೀಸನ್ ವಿನ್ನರ್ ಆಗಿ, ಅದರಿಂದ ಬರುವ ಹಣದಲ್ಲಿ ಸುಂದರವಾದ ಮನೆ ಕಟ್ಟುವ ಆಸೆಯಿದೆ. ಅದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಬಿಗ್‌ಬಾಸ್ ಹಣದಿಂದ ಕಾರು , ಬೈಕು ತೆಗೆದುಕೊಂಡು ಮೋಜು ಮಾಡುವ ಉದ್ದೇಶ ನನ್ನದಲ್ಲ. ಬದಲಾಗಿ ನನ್ನ ಕನಸಿನ ಮನೆ ಕಟ್ಟುವ ಉದ್ದೇಶ ನನ್ನದು ಎಂದು ಹೇಳಿಕೊಂಡ್ರು ರಿಯಾಜ್.
ಇನ್ನು ರಿಯಾಜ್ ಅವರು ಈಗಾಗಲೇ ಸದಾಶಿವ ನಗರದಲ್ಲಿ ಸೈಟ್‌ವೊಂದನ್ನು ಹೊಂದಿದ್ದಾರೆ. ಆದರೆ, ಅಲ್ಲಿ ಮನೆ ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಇದನ್ನು ಕೂಡ ಅವರು ನಿನ್ನೆಯ ಎಪಿಸೋಡಿನಲ್ಲಿ ಹೇಳಿದ್ರು.
Comments are closed.