ರಾಷ್ಟ್ರೀಯ

ಜಾಧವ್‌ ವಿಡಿಯೋ ಬಿಡುಗಡೆ, ಸುಳ್ಳು ಹೇಳುವ ಪರಿಪಾಠ ಮುಂದುವರಿಸಿದ ಕುತಂತ್ರಿ ಪಾಕ್: ಭಾರತ ಕಿಡಿ

Pinterest LinkedIn Tumblr


ಹೊಸದಿಲ್ಲಿ: ಭಾರತದ ಮೇಲೆ ಆರೋಪಗಳನ್ನು ಮಾಡುವ ಹಾಗೂ ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸುವ ತನ್ನ ಪರಿಪಾಠವನ್ನು ಪಾಕಿಸ್ತಾನ ಮುಂದುವರಿಸಿದೆ. ಈಗ ಕುಲಭೂಷಣ್‌ ಜಾಧವ್‌ ವಿಡಿಯೋವನ್ನು ಬಿಡುಗಡೆ ಮಾಡಿ ಮತ್ತೊಮ್ಮೆ ತನ್ನ ಕಿಡಿಗೇಡಿತನ ಇದು ತೋರಿಸಿದೆ ಎಂದು ಭಾರತ ತಿಳಿಸಿದೆ.

ಈ ರೀತಿಯ ವಿಡಿಯೋ ಬಿಡುಗಡೆಯಾಗಿರುವುದು ನಮಗೆ ಅಚ್ಚರಿ ತಂದಿಲ್ಲ. ಪಾಕಿಸ್ತಾನ ಕಿತಾಪತಿ ಮಾಡುತ್ತದೆ ಎಂಬುದು ಗೊತ್ತಿತ್ತು. ಈ ರೀತಿಯ ಸಂಚು ರೂಪಿಸುವುದರಲ್ಲಿ ಪಾಕ್‌ ಎತ್ತಿದ ಕೈ, ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಹೇಳಿಸುವುದು ಅದಕ್ಕೆ ಗೊತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ಗುರುವಾರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ಜಾಧವ್‌ ಕೆಲವು ಆತಂಕಕಾರಿ ವಿಷಯಗಳನ್ನು ಹೇಳಿರುವುದು ಪ್ರಸಾರವಾಗಿದೆ. ನನ್ನನ್ನು ನೋಡಲು ಬಂದಾಗ ತಾಯಿಯ ಕಣ್ಣುಗಳಲ್ಲಿ ಭಯ ಇತ್ತು. ತಾಯಿ ಮತ್ತು ಪತ್ನಿ ಜತೆಗಿದ್ದ ರಾಯಭಾರಿ ಕಚೇರಿ ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದನ್ನು ನೋಡಿದೆ ಎಂದು ಜಾಧವ್‌ ಹೇಳಿಕೊಂಡಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಪಾಕಿಸ್ತಾನ ಕೆಲವು ದಿನಗಳ ಹಿಂದೆ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿತ್ತು.

ಜಾಧವ್‌ ತಾಯಿ, ಪತ್ನಿ ಜತೆ ತೆರಳಿದ್ದ ರಾಯಭಾರಿ ಕಚೇರಿ ಅಧಿಕಾರಿ ಜೆ.ಪಿ. ಸಿಂಗ್‌. ಅವರು ಇಸ್ಲಾಮಾಬಾದ್‌ನಲ್ಲಿ ಉಪ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯ ಸ್ಪಷ್ಟಪಡಿಸಿದೆ.

Comments are closed.