ಕರಾವಳಿ

ಸಂವಿಧಾನ ಬದಲಾಯಿಸುವ ಹುನ್ನಾರ ಅಪಾಯಕಾರಿ : ಮಾಣಿ ಗೋಪಾಲ್

Pinterest LinkedIn Tumblr

ಕುಂದಾಪುರ: ಸ್ವಾತಂತ್ರ್ಯ ಪೂರ್ವದಲ್ಲಿ ಮೇಲ್ಜಾತಿ ಜನರಿಂದ ಸತತ ಶೋಷಣೆಗೊಳಗಾದ ಹಿಂದುಳಿದ ವರ್ಗ ಮತ್ತು ದಲಿತ ವರ್ಗಕ್ಕೆ ಅಂಬೇಡ್ಕರ್ ರಚನೆಯ ಸಂವಿಧಾನ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾನತೆಯ ಹಕ್ಕನ್ನು ಒದಗಿಸಿದೆ. ಆ ಮೂಲಕ ಈ ವರ್ಗಗಳಿಗೆ ಶೋಷಣೆ, ದೌರ್ಜನ್ಯ ಮತ್ತು ಅಸಮಾನತೆಯಿಂದ ಕೂಡ ಸ್ವಾತಂತ್ರ್ಯ ಒದಗಿಸಿದೆ.

ಆದರೆ ಇದೀಗ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಮನುವಾದಿಗಳ ತಂಡವೊಂದು ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸುವ ಕುರಿತು ಪದೇಪದೆ ಹೇಳಿಕೆ ನೀಡುತ್ತಿರುವುದು ಭವಿಷ್ಯದ ಭಾರತಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಲಿದೆ. ಈ ಮೂಲಭೂತವಾದಿಗಳ ಹಿಂದುಳಿದ ವರ್ಗ ಮತ್ತು ದಲಿತ ವಿರೋಧಿಯಾದ ಇಂತಹ ಯಾವುದೇ ಹುನ್ನಾರಗಳನ್ನು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ತೀವ್ರವಾಗಿ ವಿರೋಧಿಸುತ್ತದೆ ಎಂದು ಹಿರಿಯ ರಾಜಕಾರಣಿ ಕಾಂಗ್ರೆಸ್ ಹಿಂ.ವರ್ಗಗಳ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.