
ಪಣಜಿ: ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡ ರಾಹುಲ್ ಗಾಂಧಿಗೆ ಈ ವರ್ಷ ಹೊಸ ವರ್ಷಾಚರಣೆ ವಿಶೇಷವಾಗಿತ್ತು.
ಗೋವಾದ ರೆಸಾರ್ಟ್ ನಲ್ಲಿ ರಾಹುಲ್ ಹೊಸ ವರ್ಷಾಚರಣೆ ಮಾಡಿಕೊಂಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಕಾಂಗ್ರೆಸ್ ನ ಮಾಜಿ ಧುರೀಣೆ, ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಗೋವಾ ರೆಸಾರ್ಟ್ ನಲ್ಲಿ ಕಳೆದ ಒಂದು ವಾರದಿಂದ ಬೀಡು ಬಿಟ್ಟಿದ್ದಾರೆ.
ಇದೀಗ ರಾಹುಲ್ ಕೂಡಾ ಅಮ್ಮನಿರುವ ರೆಸಾರ್ಟ್ ಗೆ ತೆರಳಿದ್ದು ಹೊಸ ವರ್ಷವನ್ನು ಜತೆಯಾಗಿಯೇ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಶನಿವಾರ ರಾತ್ರಿಯೇ ರಾಹುಲ್ ದಕ್ಷಿಣ ಗೋವಾದಲ್ಲಿರುವ ಬೀಚ್ ರೆಸಾರ್ಟ್ ಗೆ ಬಂದಿಳಿದಿದ್ದಾರೆ. ಇದು ಅವರ ವೈಯಕ್ತಿಕ ಭೇಟಿಯಾಗಿದ್ದರಿಂದ ಗೋವಾ ಕಾಂಗ್ರೆಸ್ ನಾಯಕರೂ ತಮ್ಮ ನೇತಾರರನ್ನು ಭೇಟಿ ಮಾಡುವ ಪ್ರಯತ್ನ ನಡೆಸಿಲ್ಲ ಎನ್ನಲಾಗಿದೆ.
Comments are closed.