ಉಡುಪಿ: ಪಾಕಿಸ್ಥಾನದಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾದವ್ ರನ್ನು ಭೇಟಿಯಾಗಲು ತೆರಳಿದ್ದ ಆತನ ಪತ್ನಿ ಹಾಗೂ ತಾಯಿಯನ್ನು ಅನುಮಾನದಿಂದ ನೋಡಿ ಅವಮಾನಪಡಿಸಿರುವ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ,ಉಡುಪಿಯಲ್ಲಿ ಹಿಂದೂ ಸಂಘಟನೆಗಳು ಪಾಕಿಸ್ತಾನದ ಧ್ವಜಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು.

ಉಡುಪಿಯ ಅಜ್ಜರಕಾಡುವಿನಲ್ಲಿರುವ ಹುತಾತ್ಮರ ಸ್ಮಾರಕದ ಮುಂದೆ ಸೇರಿದ ಹಿಂದೂ ಸಂಘಟನೆ ಕಾರ್ಯಕರ್ತರು ಪಾಕಿಸ್ತಾನದ ವಿರುಧ್ದ ಘೋಷಣೆಗಳನ್ನು ಕೂಗಿದರು.
ಪಾಕಿಸ್ಥಾನ ಕುಲಭೂಷಣ್ ತಾಯಿ ಹಾಗೂ ಪತ್ನಿಯ ಸಿಂಧೂರ ಹಾಗೂ ಮಾಂಗಲ್ಯವನ್ನು ತೆಗೆಸುವುದರ ಮೂಲಕ ಹಿಂದೂ ಸಂಸ್ಕೃತಿಗೆ ಅವಮಾನ ಮಾಡಿದೆ.ಇದು ಇಡೀ ದೇಶಕ್ಕೆ ಮಾಡಿದ ಅವಮಾನ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು.
Comments are closed.