
ಮಂಗಳೂರು ಡಿಸೆಂಬರ್.29: ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲ ಭೂಷಣ್ ಜಾಧವ್ ಪತ್ನಿ ಮತ್ತು ತಾಯಿಯನ್ನು ಅವಮಾನಿಸಿದ ಪಾಕಿಸ್ತಾನದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಶುಕ್ರವಾರ ನಗರದ ಕದ್ರಿ ಮಲ್ಲಿಕಟ್ಟ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಅವರು ಮಾತನಾಡಿ ಕುಲ ಭೂಷಣ್ ಜಾಧವ್ ಪತ್ನಿ ಮತ್ತು ತಾಯಿಯನ್ನು ಅವಮಾನಿಸಿದ ಪಾಕಿಸ್ತಾನದ ಅಧಿಕಾರಿಗಳ ಕ್ರಮದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.
ಬಜರಂಗದಳದ ರಾಜ್ಯ ವಿಭಾಗ ಪ್ರಾಂತ್ಯ ಸಂಚಾಲಕ ಶರಣ್ ಪಂಪ್‌ವೆಲ್ ಹಾಗೂ ವಿಎಚ್‌ಪಿ ಮುಖಂಡ ಭುಜಂಗ ಕುಲಾಲ್ ಮಾತನಾಡಿದರು.

ಪ್ರತಿಭಟನಾ ಸಭೆಯ ನಂತರ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ನೂರಾರು ಪ್ರತಿಭಟನಕಾರರು ಬಳಿಕ ಪಾಕಿಸ್ತಾನದ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
Comments are closed.