ಉಡುಪಿ: ತುಳುಕೂಟ (ರಿ.) ಉಡುಪಿ ವತಿಯಿಂದ ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ್ಣ ಬಯಲು ರಂಗ ಮಂಟಪದಲ್ಲಿ ಏಳು ದಿನಗಳ ಕಾಲ ನಡೆದ ಹದಿನಾರನೇ ವರ್ಷದ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ
ಕೆಮ್ತೂರು ತುಳು ನಾಟಕ ಪರ್ಬದಲ್ಲಿ ನೀರೆಬೈಲೂರು ರಂಗಸನ್ನಿಧಿ ತಂಡದ ಸರ್ಪ ಸಂಪಿಗೆ ನಾಟಕಕ್ಕೆ ರೂ.15 ಸಾವಿರ ನಗದು ಸಹಿತ ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿ ಲಭಿಸಿದೆ.
ಕೊಡವೂರು ನವಸುಮ ರಂಗಮಂಚ (ರಿ.) ತಂಡದ ದುರ್ದುಂಡೆ ದ್ರೌಣಿ ನಾಟಕಕ್ಕೆ ರೂ.10 ಸಾವಿರ ನಗದು ಸಹಿತ ದ್ವಿತೀಯ ಶ್ರೇಷ್ಠ ನಾಟಕ ಪ್ರಶಸ್ತಿ ಲಭಿಸಿದೆ.
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕಕ್ಕೆ ರೂ.7 ಸಾವಿರ ನಗದು ಸಹಿತ ತೃತೀಯ ಶ್ರೇಷ್ಠ ನಾಟಕ ಪ್ರಶಸ್ತಿ ಲಭಿಸಿದೆ.

ನೀರೆಬೈಲೂರು ರಂಗಸನ್ನಿಧಿ ತಂಡದ ಸರ್ಪ ಸಂಪಿಗೆ ನಾಟಕದ ನಿರ್ದೇಶಕ ಸುರೇಂದ್ರ ಮೋಹನ್ ಮುದ್ರಾಡಿ ಪ್ರಥಮ ಶ್ರೇಷ್ಠ ನಿರ್ದೇಶಕ, ಕೊಡವೂರು ನವಸುಮ ರಂಗಮಂಚ (ರಿ.) ತಂಡದ ದುರ್ದುಂಡೆ ದ್ರೌಣಿ ನಾಟಕದ ನಿರ್ದೇಶಕ ಬಾಲಕೃಷ್ಣ ಕೊಡವೂರು ದ್ವಿತೀಯ ಶ್ರೇಷ್ಠ ನಿರ್ದೇಶಕ, ಕರಾವಳಿ ಕಲಾವಿದರು (ರಿ.) ಮಲ್ಪೆ ತಂಡದ ಮಂತ್ರದೇವತೆ ನಾಟಕ ನಿರ್ದೇಶಕ ದಿನೇಶ್ಆಚಾರ್ಯ ಸುಬ್ರಮಣ್ಯನಗರ ತೃತೀಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶ್ರೇಷ್ಠ ರಂಗಪರಿಕರ/ಪ್ರಸಾಧನ: ಸರ್ಪ ಸಂಪಿಗೆ ನಾಟಕದ ರಂಗಸನ್ನಿಧಿ ನೀರೆಬೈಲೂರು ತಂಡ ಪ್ರಥಮ, ದುರ್ದುಂಡೆ ದ್ರೌಣಿ ನಾಟಕದ ನವಸುಮ ರಂಗಮಂಚ (ರಿ.)ಕೊಡವೂರು ತಂಡ ದ್ವಿತೀಯ, ಚಂದ್ರೆಎನ್ನೊಟ್ಟುಗುಲ್ಲೆ ನಾಟಕದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡ ತೃತೀಯ.
ಶ್ರೇಷ್ಠ ಬೆಳಕು: ಕೊಡವೂರು ನವಸುಮ ರಂಗಮಂಚ (ರಿ.) ತಂಡದ ದುರ್ದುಂಡೆ ದ್ರೌಣಿ ನಾಟಕದ ಜಯಶೇಖರ ಮಡೆಪ್ಪಾಡಿ ಪ್ರಥಮ, ಮಲ್ಪೆ ಕರಾವಳಿ ಕಲಾವಿದರು (ರಿ.) ತಂಡದ ಮಂತ್ರದೇವತೆ ನಾಟಕದ ನಿತೇಶ್ ಬಂಟ್ವಾಳ್ ದ್ವಿತೀಯ, ರಂಗಸನ್ನಿಧಿ ನೀರೆಬೈಲೂರು ತಂಡದ ಸರ್ಪಸಂಪಿಗೆ ನಾಟಕದ ರಾಜು ಮಣಿಪಾಲ ತೃತೀಯ.
ಶ್ರೇಷ್ಠ ಸಂಗೀತ: ರಂಗಸನ್ನಿಧಿ ನೀರೆಬೈಲೂರು ತಂಡದ ಸರ್ಪಸಂಪಿಗೆ ನಾಟಕದ ಕೃಷ್ಣ ಕಾಮತ್ ಪ್ರಥಮ, ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ಚಂದ್ರೆಎನ್ನೊಟ್ಟುಗುಲ್ಲೆ ನಾಟಕದ ದಿವಾಕರ್ ಕಟೀಲ್ ದ್ವಿತೀಯ, ಕೊಡವೂರು ನವಸುಮ ರಂಗಮಂಚ (ರಿ.) ತಂಡದ ದುರ್ದುಂಡೆ ದ್ರೌಣಿ ನಾಟಕದ ಶರತ್ಚಂದ್ರ ತೃತೀಯ.
ಶ್ರೇಷ್ಠ ನಟ: ನೀರೆಬೈಲೂರು ರಂಗಸನ್ನಿಧಿ ತಂಡದ ಸರ್ಪ ಸಂಪಿಗೆ ನಾಟಕದ ಪ್ರಜ್ವಲ್ ಪೂಜಾರಿ (ಕಾಳಿಂಗ) ಪ್ರಥಮ, ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ಸಂತೋಷ್ ನಾಯಕ್ ಪಟ್ಲ (ಬುಡಾನ್ಸಾಬೆರ್) ದ್ವಿತೀಯ, ಕೊಡವೂರು ನವಸುಮ ರಂಗಮಂಚ (ರಿ.) ತಂಡದ ದುರ್ದುಂಡೆ ದ್ರೌಣಿ ನಾಟಕದ ಬಾಲಕೃಷ್ಣ ಕೊಡವೂರು (ಅಶ್ವತ್ಥಾಮ) ತೃತೀಯ.
ಶ್ರೇಷ್ಠ ನಟಿ: ದುರ್ದುಂಡೆ ದ್ರೌಣಿ ನಾಟಕದ ಪುಷ್ಪಲತಾ (ದ್ರೌಪದಿ) ಪ್ರಥಮ, ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ಸೌಮ್ಯ ಆಚಾರ್ಯ (ಮುನೀರ್ಜಾನ್) ದ್ವಿತೀಯ, ಸರ್ಪ ಸಂಪಿಗೆ ನಾಟಕದ ಪವಿತ್ರ (ಸಿರಿಸಂಪಿಗೆ) ತೃತೀಯ.
ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ರಂಗಸುದರ್ಶನ (ರಿ.) ಸಸಿಹಿತ್ಲು ತಂಡದ ಒಂಜಿ ಸಿರಿ ರಡ್ಡ್ ಬೊಂಡ ನಾಟಕದ ಜಯ ಎಸ್.ಶೆಟ್ಟಿ ಪಡುಬಿದ್ರಿ (ಪಾಂಗು ಬನ್ನಾರ್) ಮಲ್ಪೆ ಕರಾವಳಿ ಕಲಾವಿದರು ತಂಡದ ಮಂತ್ರದೇವತೆ ನಾಟಕದ ನೂತನ್ಕುಮಾರ್ (ಬೀರಣ್ಣ), ಉಡುಪಿ ಅಮಾಸಕಲಾತಂಡದ ಬರ್ಬರೀಕ ನಾಟಕದ ಪ್ರವೀಣ್ ಆಚಾರ್ಯ ದೊಡ್ಡಣಗುಡ್ಡೆ (ಗೂರಾ), ಮಂಗಳೂರು ಗಂಜಿಮಠ ಬಂಗಾರ್ ಕಲಾವಿದೆರ್ ತಂಡದ ಭಾಸ್ಕರೆ ಬಂಗೊಡುಲ್ಲೆ ನಾಟಕದ ದೀಕ್ಷಿತ್ ಪೊಳಲಿ (ಭಾಸ್ಕರೆ), ರಂಗಸನ್ನಿಧಿ ನೀರೆಬೈಲೂರು ತಂಡದ ಸರ್ಪ ಸಂಪಿಗೆ ನಾಟಕದ ಚೇತನ್ ನೀರೆ (ರಾಜಕುಮಾರ), ನವಸುಮ ರಂಗಮಂಚ (ರಿ.)ಕೊಡವೂರು ತಂಡದ ದುರ್ದುಂಡೆದ್ರೌಣಿ ನಾಟಕದ ಕೆ ರಾಜಗೋಪಾಲ್ ಶೇಟ್ (ಕೃಪಾಚಾರ್ಯ), ಉಡುಪಿ ಅಮಾಸಕಲಾತಂಡದ ಬರ್ಬರೀಕ ನಾಟಕದ ಶಶ್ಮಿತಾ ಎಸ್. ಕಾಪು (ಬುದ್ಧಿ), ಮಂಗಳೂರು ಗಂಜಿಮಠ ಬಂಗಾರ್ ಕಲಾವಿದೆರ್ ತಂಡದ ಭಾಸ್ಕರೆ ಬಂಗೊಡುಲ್ಲೆ ನಾಟಕದ ಪ್ರತಿಮಾ ಆಚಾರ್ಯ ಬಡಗಬೆಳ್ಕೂರು (ನೇತ್ರ), ಮಲ್ಪೆ ಕರಾವಳಿ ಕಲಾವಿದರು (ರಿ.) ತಂಡದ ಮಂತ್ರದೇವತೆ ನಾಟಕದ ಅಶ್ವಿನಿ ಅಂಬಲಪಾಡಿ(ಮಂತ್ರದೇವತೆ), ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ರಂಜಿತಾ (ಆರ್ಷಿಯಾ).
ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲನಟರು: ಉಡುಪಿ ಅಮಾಸಕಲಾತಂಡದ ಬರ್ಬರೀಕ ನಾಟಕದ ಮಾಸ್ಟರ್ ರಾಹುಲ್ ಕೊರಂಗ್ರಪಾಡಿ (ಹುಡುಗ), ರಂಗಸನ್ನಿಧಿ ನೀರೆಬೈಲೂರು ಸರ್ಪ ಸಂಪಿಗೆ ನಾಟಕದ ಮಾಸ್ಟರ್ ಗಗನ್ ಶೆಟ್ಟಿ (ಭಾಗವತ).
ಉದಯೋನ್ಮುಖ ಪ್ರತಿಭೆ: ಉಡುಪಿ ಅಮಾಸಕಲಾತಂಡದ ದೃಶಾ ಕೊಡಗು.
ಅವರಿಗೆ ಬರ್ಬರೀಕ ನಾಟಕದ ಹಿನ್ನೆಲೆ ಸಂಗೀತಕ್ಕಾಗಿ ವಿಶೇಷ ಮೆಚ್ಚುಗೆ ಪ್ರಶಸ್ತಿ ದೊರೆತಿದೆ.
ಡಿ.21ರಿಂದ 27ರ ತನಕ ನಡೆದ ಕೆಮ್ತೂರು ತುಳುನಾಟಕ ಸ್ಫರ್ಧೆಯ ತೀರ್ಪುಗಾರರಾಗಿ ಖ್ಯಾತರಂಗ ಕರ್ಮಿಗಳಾದ ಯಾದವ ವಿ. ಕರ್ಕೇರ, ಪ್ರಶಾಂತ್ ಶೆಟ್ಟಿ, ಅಶ್ವತ್ಥ್ ಭಾರದ್ವಾಜ್ ಸಹಕರಿಸಿದ್ದರು. ನಾಟಕ ಸ್ಫರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಜ.21ರಂದು ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದ್ದು, ಅಂದು ಪ್ರಥಮ ಪ್ರಶಸ್ತಿ ವಿಜೇತ ನೀರೆಬೈಲೂರು ರಂಗಸನ್ನಿಧಿ ತಂಡದ ಸರ್ಪ ಸಂಪಿಗೆ ನಾಟಕದ
ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟಉಡುಪಿ (ರಿ.) ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಕೆಮ್ತೂರು ತುಳುನಾಟಕ ಸ್ಫರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Comments are closed.