
ಜೈಪುರ: ಟಿವಿ ಚಾನೆಲ್‌ಗಳಲ್ಲಿ ಹಗಲಿನ ವೇಳೆ ಅಂದರೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಕಾಂಡೋಂ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ತಡೆಯೊಡ್ಡಿರುವ ಕೇಂದ್ರ ಪ್ರಸಾರ ಇಲಾಖೆ ಸಚಿವಾಲಯದ ಆದೇಶವನ್ನು ರಾಜಸ್ಥಾನ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಸರ್ಕಾರದ ಆದೇಶದ ವಿರುದ್ಧ ಎನ್‌ಜಿಒ ಒಂದು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಜೋಗ್ ಹಾಗೂ ನ್ಯಾ. ಡಿ.ಸಿ. ಸೋಮನಿ ಅವರುಳ್ಳ ನ್ಯಾಯಪೀಠ, ಆದೇಶದ ಹಿಂದಿನ ಉದ್ದೇಶದ ಬಗ್ಗೆ ವಿವರಣೆ ನೀಡುವಂತೆ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದೆ. ಡಿ. 11ರಂದು, ಸಚಿವಾಲಯದಿಂದ ಈ ಆದೇಶ ಹೊರಬಿದ್ದಿತ್ತು.
-ಉದಯವಾಣಿ
Comments are closed.