ಮನೋರಂಜನೆ

ಬಿಗ್ ಬಾಸ್ ಮನೆಯಲ್ಲಿ ಹಲ್ಲೆ ನಡೆಸಿದ ನಟಿ ಸಂಯುಕ್ತಾ ವಿರುದ್ಧ ಹರಿಹಾಯ್ದ ನಟ ಜಗ್ಗೇಶ್ !

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಹೋಗಿದ್ದ ನಟಿ ಸಂಯುಕ್ತಾಗೆ ಹಿರಿಯ ನಟ ಜಗ್ಗೇಶ್ ಟ್ವಿಟರ್‍ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಅವರ ಮೇಲೆ ಕೈ ಮಾಡಿರುವ ಕಾರಣ ಈ ಸ್ತ್ರೀ ಕುಲಕ್ಕೇ ಕಳಂಕ ಎಂದಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ..! ಇಂಥಹ ಅರ್ಧ ಬೆಂದ ಮಡಕೆ ನೋಡಿಯೇ ನಮ್ಮ ಪೂರ್ವಿಕರು ನುಡಿದಿರಬಹುದು. ಆಚಾರ್ಯರ ಮೇಲೆ ಕೈ ಮಾಡಿದ ಈಕೆ ಕ್ಷಮೆಗೆ ಅನರ್ಹ. ಭವಿಷ್ಯ ಬೆಳೆದ ವಾತಾವರಣ ಸರಿ ಇಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ ಗೆಸ್ಟ್ ಆಗಿ ಬಿಗ್ ಮನೆಗೆ ಬಂದಿದ್ದರು. ಬಂದು 15 ದಿನ ಕಳೆದಿರಲಿಲ್ಲ, ಆಗಲೇ ಭಾರೀ ರಂಪಾಟ ಮಾಡಿ ಹೊರಹೋಗಿದ್ದಾರೆ. ಕಾಲೇಜು ಕುಮಾರ ಸಿನಿಮಾ ವಿಚಾರದಲ್ಲೂ ಈ ನಟಿ ಕಿರಕ್ ಮಾಡಿ ಸುದ್ದಿಯಾಗಿದ್ದರು.

Comments are closed.