ಗಲ್ಫ್

ದುಬೈ, ಅಲೈನ್, ಫುಜೈರ, ರಾಸೆಲ್ ಖೈಮಾ ಸೇರಿದಂತೆ ಯುಎಇಯಲ್ಲಿ ಭಾರೀ ಮಳೆ; ಹಲವೆಡೆ ನೆರೆ: ಜನ ಜೀವನ ಅಸ್ತವ್ಯಸ್ತ

Pinterest LinkedIn Tumblr

ದುಬೈ: ದುಬೈ, ಅಲೈನ್, ಫುಜೈರ, ರಾಸೆಲ್ ಖೈಮಾ ಸೇರಿದಂತೆ ಯುಎಇಯ ಬಹುತೇಕ ಹಲವೆಡೆ ಭಾರೀ ಮಳೆಯಾಗಿದ್ದು, ಕೆಲವೆಡೆ ನೆರೆ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತ ಗೊಂಡಿತ್ತು.

ಬೆಳೆಗ್ಗೆಯಿಂದಲೇ ಭಾರೀ ಮಳೆ ಸುರಿದ ಪರಿಣಾಮ ಕೆಲೆವೆಡೆ ಸಣ್ಣಪುಟ್ಟ ಘಟನೆಗಳು ಸಂಭವಿಸಿದ್ದು, ಯಾವುದೇ ರೀತಿಯ ಜೀವ ಹಾನಿ ಉಂಟಾಗಿಲ್ಲ ಎಂದು ನ್ಯಾಷನಲ್ ಕ್ರೈಸಿಸ್ ಆಂಡ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಅಥಾರಿಟಿ (NCEMA ) ಸ್ಪಷ್ಟಪಡಿಸಿದೆ.

ಫುಜೈರಾದಲ್ಲಿ ನೆರೆ ಉಂಟಾದರೆ, ರಾಸೆಲ್ ಖೈಮಾದಲ್ಲಿ ಆಲಿಕಲ್ಲು ಮಳೆಯಾಗಿದೆ. ಹಲವು ಕಡೆ ಬಾಹ್ಯಾಂಗಲಿ ನೆರೆಯಿಂದಾಗಿ ಜಲಾವೃತಗೊಂಡಿದೆ.

ಕಲ್ಬಾದಲ್ಲಿ 167 ಎಮಿರೇಟಿಸ್’ಗಳನ್ನು ನೆರೆಯಿಂದ ರಕ್ಷಿಸಿ, ಫುಜೈರಾ ಹೋಟೆಲಿನಲ್ಲಿ ಆಶ್ರಯ ನೀಡಲಾಗಿದೆ. ಇನ್ನೊಂದೆಡೆ 28 ಕುಟುಂಬಗಳ ಒಟ್ಟು 558 ಮಂದಿಗೆ ಫುಜೈರಾ ಆಶ್ರಯ ನೀಡಲಾಗಿದೆ. ಜೊತೆಹೀಗೆ ಅಲೈನಿನಲ್ಲಿ 24 ಕುಟುಂಬಗಳನ್ನು ತೆರವುಗೊಳಿಸಿ, ಹೋಟೆಲೊಂದರಲ್ಲಿ ಆಶ್ರಯನೀಡಲಾಗಿದೆ ಎಂದು ನ್ಯಾಷನಲ್ ಕ್ರೈಸಿಸ್ ಆಂಡ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಅಥಾರಿಟಿ ಹೇಳಿದೆ.

ಶಾರ್ಜಾ, ಅಜ್ಮಾನ್’ನಲ್ಲಿಯೂ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

Comments are closed.