ರಾಷ್ಟ್ರೀಯ

ನಮ್ಮ ಸರ್ಕಾರ ಬಂದ್ರೆ ತಕ್ಷಣ ಗೌರಿ ಹಂತಕರನ್ನು ಬಂಧಿಸುತ್ತೇವೆ

Pinterest LinkedIn Tumblr


ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಗೆದ್ದು ಅಧಿಕಾರಕ್ಕೆ ಬಂದರೆ ತಕ್ಷಣವೇ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹಂತಕರನ್ನು ಬಂಧಿಸುವುದಾಗಿ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

ಭಾನುವಾರ ನಗರದ ಮುರುಗೇಶ್‌ ಪಾಳ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ರಾಜ್‌ನಾಥ್‌ ಸಿಂಗ್‌ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

‘ಸಿದ್ಧರಾಮಯ್ಯ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ, ಜನರ ಮೇಲೆ ಸಾಲದ ಹೊರೆ ಇರಿಸಿದೆ. ಸಾಮಾಜಿಕ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಪತ್ರಕರ್ತರ ಹತ್ಯೆ ನಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಇದನ್ನೆಲ್ಲಾ ತಡೆಯಲು ಯಡಿಯೂರಪ್ಪ ಅವರ ಕೈಗೆ ಅಧಿಕಾರ ನೀಡಿ’ ಎಂದು ಮನವಿ ಮಾಡಿದರು.

ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ, ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ ಎಂದರು.

‘ಟಿಪ್ಪು ಜಯಂತಿ ಆಚರಣೆ ಬಗ್ಗೆ ಕಿಡಿ ಕಾರಿದ ನಾನು ಇತಿಹಾಸದ ಸರಿ ತಪ್ಪುಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ವಿವಾದಿತ ವಿಚಾರಗಳಿಂದ ದೂರ ಇರಬೇಕು. ನಾವು ರಾಣಿ ಚೆನ್ನಮ್ಮ, ಕೆಂಪೇಗೌಡ, ವಿಶ್ವೇಶ್ವರಯ್ಯ ಅವರಜಯಂತಿಗಳನ್ನು ಆಚರಿಸುವ’ ಎಂದರು.

‘ನನಗೆ ಕರ್ನಾಟಕಕ್ಕೆ ಭಾವಾನಾತ್ಮಕ ಸಂಬಂಧವಿದೆ. ಅಧಿಕಾರ ಬದಲಾವಣೆಗೆ ಈ ಯಾತ್ರೆ ಅಲ್ಲ’ ಎಂದರು.

ಖಾಲಿ ಖಾಲಿ ಕುರ್ಚಿಗಳು
ರಾಜ್‌ನಾಥ್‌ ಸಿಂಗ್‌ ಅವರು ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯ ಎದುರಿಗಿದ್ದ ಕುರ್ಚಿಗಳೆಲ್ಲಾ ಖಾಲಿಯಾಗಿದ್ದವು. ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಮೊದಲೇ ತಡವಾದುದರಿಂದ ಎದ್ದುಹೋಗಿದ್ದರು.

-ಉದಯವಾಣಿ

Comments are closed.