
ದಾಖಲೆ ನಿರ್ಮಿಸಲು ಪ್ರಾಣವನ್ನೇ ಪಣಕ್ಕಿಡುವವರನ್ನು ನಾವು ನೊಡುತ್ತಲೇ ಇರುತ್ತೇವೆ. 23 ವರ್ಷ ವಯಸ್ಸಿನ ಕಲಾವಿದ ನಾಠನ್ ಪೌಲಿನ್ ಪ್ರಾಣವನ್ನೂ ಲೆಕ್ಕಿಸದೇ ಪ್ಯಾರಿಸ್‌ನ ಐಫೆಲ್ ಟವರ್ ಬಳಿ ದಾಖಲೆಯೊಂದನ್ನು ಬರೆದಿದ್ದಾರೆ.
ಸೀನ್‌ಗೆ ನದಿಗೆ ಅಡ್ಡಲಾಗಿ 200 ಅಡಿ ಮೇಲಕ್ಕೆ ಕಟ್ಟಲಾಗಿದ್ದ ಹಗ್ಗದ ಮೇಲೆ ಆ ತುದಿಯಿಂದ ಈ ತುದಿ ವರೆಗೆ ನಡೆದಿದ್ದಾನೆ. ಅತಿ ಎತ್ತರಲ್ಲಿ ಹಗ್ಗದ ನಡಿಗೆ ಮಾಡಿದ ವ್ಯಕ್ತಿ ಎಂಬ ದಾಖಲೆ ಇವರ ಹೆಸರಿಗೆ ಸೇರಿದೆ. ಇವರ ಈ ಸಾಹಸವನ್ನು ಸ್ಥಳೀಯ ಚಾನಲ್ ನೇರ ಪ್ರಸಾರ ಮಾಡಿದೆ. ಅದನ್ನು ಟಿವಿಯಲ್ಲಿ ಮತ್ತು ಪ್ರತ್ಯಕ್ಷವಾಗಿ ನೋಡಿದವರ ಎದೆ ಢವ ಢವ ಎಂದು ಹೇಳುತ್ತಿತ್ತಂತೆ.
-ಉದಯವಾಣಿ
Comments are closed.