ರಾಷ್ಟ್ರೀಯ

ಗಂಡನನ್ನು ರಕ್ಷಿಸಲು ಹೋಗಿ ಜೈಲು ಪಾಲಾದ ಪತ್ನಿ!

Pinterest LinkedIn Tumblr


ಭೋಪಾಲ್‌: ಇಲ್ಲೊಬ್ಬ ಮಹಿಳೆ ಬಂಧನದಲ್ಲಿದ್ದ ತನ್ನ ಗಂಡನನ್ನು ಪೊಲೀಸರಿಂದ ರಕ್ಷಿಸಲು ಹೋಗಿ ಪೊಲೀಸರ ಮುಖಕ್ಕೆ ವಿಷಕಾರಿ ಅನಿಲವನ್ನು ಸಿಂಪಡಿಸಿದ ಘಟನೆ ನಡೆದಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆಗೆ ಇಟಾರಸಿ ರೈಲ್ವೇ ಠಾಣೆಗೆ ಕರೆತಂದಿದ್ದರು, ಆದರೆ ಆತನ ಹೆಂಡತಿ ಗಂಡನನ್ನು ಪೊಲೀಸರಿಂದ ರಕ್ಷಿಸಲು ಆತನನ್ನು ಭೇಟಿ ಮಾಡುವ ನೆಪದಲ್ಲಿ ಠಾಣೆಗೆ ಬಂದಿದ್ದಾಳೆ.

ಬಳಿಕ ತನ್ನ ಬಳಿಯಿದ್ದ ವಿಷಕಾರಿ ಅನಿಲವನ್ನು ಪೊಲೀಸರ ಮುಖಕ್ಕೆ ಎರಚಿದ್ದಾಳೆ, ತನ್ನ ಗಂಡನನ್ನು ಜೈಲಿನಿಂದ ಹೊರ ಹೋಗವಂತೆ ಸಹಾಯ ಮಾಡಿದ್ದಾಳೆ. ಈಕೆಯ ಕೃತ್ಯದಿಂದ ಕೆಲ ಕಾಲ ಗಾಬರಿಗೊಂಡ ಪೊಲೀಸರು ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತರಲು ಯಶಸ್ವಿಯಾಗಿದ್ದಾರೆ. ಅಲ್ಲದೇ ಪರಾರಿಯಾಗುತ್ತಿದ್ದ ಆತನನ್ನು ಬಂಧಿಸಿದ್ದಾರೆ. ಇಷ್ಟೆಲ್ಲಾ ರಂಪಾಟಕ್ಕೆ ಕಾರಣವಾದ ಆತನ ಹೆಂಡತಿಯನ್ನು ಬಂಧಿಸಿದ್ದಾರೆ.

Comments are closed.