
ಕರ್ನಾಟಕದ ಮಣ್ಣಿನಲ್ಲಿ ಧಾರ್ಮಿಕ ಕ್ರಾಂತಿಯನ್ನೇ ಸೃಷ್ಟಿಸಿದ , ಸಮನ್ವಯ ವಿದ್ಯಾಕೇಂದ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಪ್ರಚಾರಾರ್ಥ 2018 ರ ವರ್ಷದ ಕ್ಯಾಲೆಂಡರ್ ಅನ್ನು ದುಬೈಯಲ್ಲಿ ನಡೆದ ಜಂಟೀ ಮೀಲಾದ್ ಕಾರ್ಯಕ್ರಮದಲ್ಲಿ ಅನಾವರಣ ಗೊಳಿಸಲಾಯಿತು. ಇತ್ತೀಚೆಗೆ ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡ ಜಂಟೀ ಮೀಲಾದ್ ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ರವರು ಕೆ ಐ ಸಿ 2018 ರ ವರ್ಷದ ಕ್ಯಾಲೆಂಡರ್ ನ್ನು ಕೇಂದ್ರ ಸಮಿತಿ ಪೋಷಕರೂ ಉದ್ಯಮಿಗಳು ಆದ ಯೂಸುಫ್ ಹಾಜಿ ಬೆರಿಕೆಯವರಿಗೆ ಪ್ರಥಮ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಅಕಾಡೆಮಿ ಕಾರ್ಯವೈಖರಿ , ಅಲ್ಲಿನ ಶಿಕ್ಷಣ ಪದ್ಧತಿ , ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಗೊಂಡ ವಾಫಿ ಶಿಕ್ಷಣ ಪದ್ದತಿಯ ಕುರಿತು ವಿವರಿಸಿದ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ರವರು ಸರ್ವ ಸಹಕಾರವನ್ನು ಕೋರಿದರು. ಕಾರ್ಯಕ್ರಮದಲ್ಲಿ ಹನೀಫ್ ಹುದವಿ ದೇಲಂಪಾಡಿ, ಸಯ್ಯದ್ ಅಸ್ಕರಲಿ ತಂಙಳ್ ಕೋಲ್ಪೆ , ಅಶ್ರಫ್ ಷಾ ಮಂತೂರ್. ಇರ್ಷಾದ್ ದಾರಿಮಿ ಮಿತ್ತಬೈಲ್, ಷರೀಫ್ ಕಾವು , ಅಬ್ದುಲ್ ಖಾದರ್ ಬೈತಡ್ಕ , ಸಲೀಮ್ ಅಲ್ತಾಫ್ ಫರಂಗಿಪೇಟೆ ಮೊದಲಾದವರು ಉಪಸ್ಥಿರಿದ್ದರು.
Comments are closed.