
ದುಬೈ: ಪ್ರವಾದಿಯವರ ಜೀವನದ ಪ್ರತಿಯೊಂದು ಘಟನೆಗಳು ಇತಿಹಾಸದ ಪುಟ ಗಳಲ್ಲಿ ಧಾಖಲಿಸಲ್ಪಟ್ಟಿದೆ. ಅತ್ಯಂತ ನಿಕೃಷ್ಟ ವಾಗಿದ್ದ ಸಮುದಾಯವೊಂದನ್ನು ಆಧರ್ಮ ದಿಂದ ಧರ್ಮದೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ , ಮೌಢ್ಯದಿಂದ ನೈಜತೆಯೆಡೆಗೆ ಸಮುದ್ಧೀಕರಿಸಿ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟ ಸಮಾಜವೆಂದು ಕುರ್-ಆನ್ ಘೋಷಿಸುವ ತನಕ ಸಂಸ್ಕರಿಸಿದ ಕೀರ್ತಿ ಪ್ರವಾದಿಯವರಿಗೆ ಸಲ್ಲುತ್ತದೆ. ಇಷ್ಟೊಂದು ವಿವರ ಲಭ್ಯವಿರುವ ಮಹಾನ್ ಪುರುಷ ಈ ವರೆಗೆ ಜಗತ್ತಿನಲ್ಲೇ ಅವತರಿಸಲ್ಪಟ್ಟಿಲ್ಲ. ಮಹಿಳಾ ಸಮಾಜವನ್ನು ಅತ್ಯಂತ ಕೀಳು ಮಟ್ಟದಿಂದ ಕಾಣುತ್ತಿದ್ದ ಕಾಲದಲ್ಲಿ ಹೆಣ್ಣಿಗೆ ಉನ್ನತ ಸ್ಥಾನವನ್ನು ನೀಡಿದ ಪರಿಶುದ್ಧ ಇಸ್ಲಾಮ್ ಧರ್ಮದ ಕೊನೆಯ ಪ್ರವಾದಿ ವರ್ಯರಾಗಿರುತ್ತಾರೆ ಮುತ್ತು ರಸೂಲ್ (ಸ ಅ ) . ಅವರ ಚರ್ಯೆಯಂತೆ ಜೀವಿಸಿ ಪರಲೋಕ ಪ್ರಾಪ್ತರಾಗೋಣ ಎಂದು ದೇರಾ ಬನಿಯಾಸ್ ರಸ್ತೆಯಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಜಂಟೀ ಮೀಲಾದ್ ಆಶಿಕ್ ಎ ರಸೂಲ್ ಮತ್ತು 4೬ ನೇ ಯು.ಎ.ಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಯುವ ಪ್ರಭಾಷಕರಾದ ಹನೀಫ್ ಹುದವಿ ದೇಲಂಪಾಡಿ ರವರು ಕರೆ ನೀಡಿದರು.







ಇದೆ ಸಂಧರ್ಭದಲ್ಲಿ ಯು ಎ ಇ ರಾಷ್ಟ್ರೀಯ ದಿನಾಚರಣೆಯ ಕುರಿತು ಈ ರಾಷ್ಟ್ರವು ಅನಿವಾಸಗಳಾದ ನಮ್ಮಂತಹ ಬಡಪಾಯಿಗಳಿಗೆ ಅನ್ನದಾತ ರಾಷ್ಟ್ರವಾಗಿದ್ದು , ಉದ್ಯೋಗ ಬಯಸಿ ಬಂದವರಿಗೆ ಮುಗುಳು ನಗೆಯೊಂದಿಗೆ ಆಸರೆ ನೀಡಿದ ರಾಷ್ಟ್ರ ಇದಾಗಿದ್ದು ಈ ರಾಷ್ಟ್ರವನ್ನು ಪ್ರೀತಿಸಿ ಗೌರವಿಸಬೇಕಾಗಿರುವುದು ನಮ್ಮೆಲ್ಲರ ಮೇಲಿನ ಆದ್ಯ ಕರ್ತವ್ಯವಾಗಿದ್ದು ಸರ್ವರಿಗೂ ಯುಎ ಇ ರಾಷ್ಟ್ರೀಯ ದಿನಾಚರಣೆಯ ಶುಭ ಹಾರೈಸಿದರು .
ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಳ್ ರವರು ಸಭಾಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಯ್ಯದ್ ಹಕೀಮ್ ತಂಙಳ್ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು . ನಂತರ ಖಾಸಗೀ ಕಾರ್ಯಕ್ರಮಗಳ ನಿಮಿತ್ತ ಯು ಎ ಇ ಗೆ ಆಗಮಿಸಿದ ಇರ್ಷಾದ್ ದಾರಿಮಿ ಮಿತ್ತಬೈಲ್ ರವರು ಕಾರ್ಯಕ್ರಮವನ್ನು ಉದ್ಗಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ನಬಿ (ಸ ಅ ) ಜೀವನ ಚರ್ಯೆಯನ್ನು ವಿವವರಿಸಿದರು .











ಮೀಲಾದ್ ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ಸ್ವಾಗತ ಭಾಷಣದಲ್ಲಿ ಮಾತನಾಡುತ್ತಾ ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯು ಜಂಟೀ ಯಾಗಿ ಇಂದು ಬೃಹತ್ ಮೀಲಾದ್ ಹಾಗೂ ಯು ಎ ಇ ರಾಷ್ಟ್ರೀಯ ದಿನಾಚರಣೆಯನ್ನು ಹಮ್ಮಿಕೊಂಡಿದ್ದು , ಕರ್ನಾಟಕ ಇಸ್ಲಾಮಿಕ್ ಸೆಂಟರ್ , ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ , ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ತೋಡಾರ್ ಕಳೆದ ಹಲವಾರು ವರ್ಷಗಳಿಂದ ಯು ಎ ಇ ಯಲ್ಲಿ ಕಾರ್ಯಾಚರಿಸುತ್ತಿದ್ದು ನಿಸ್ವಾರ್ಥತೆಯಿಂದ ಕೂಡಿದ ತಮ್ಮಂತಹ ಹಿತೈಷಿ ವರ್ಗದ ಸಹಕಾರದೊಂದಿಗೆ ತಾಯಿನಾಡಿನಲ್ಲಿ ಸಮನ್ವಯ ವಿದ್ಯಾ ಕೇಂದ್ರಗಳನ್ನು ಮುನ್ನಡೆಸುತ್ತಿದ್ದು ದೀನೀ ಪ್ರೇಮಿಗಳಾದ ತಾವೆಲ್ಲರೂ ಸಂಸ್ಥೆಯ ಪ್ರಗತಿಯಲ್ಲಿ ಕೈಜೋಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುವಂತೆ ಕೇಳಿಕೊಂಡು ಅಥಿತಿ ಗೌರವಾನ್ವಿತರನ್ನು ಸ್ವಾಗತಿಸಿದರು.
ಖಾಸಗೀ ಕಾರ್ಯಕ್ರಮಗಳಿಗಾಗಿ ಯು ಎ ಇ ಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮಹಮ್ಮದ್ ರವರು ಮಾತನಾಡಿ ಅನಾಚಾರ ಅಧರ್ಮದ ಕಡೆಗೆ ಆಕರ್ಷಿತರಾಗಿ ಸಮುದಾಯದಿಂದ ಅವಗಣಿಸಲ್ಪಟ್ಟು ಶಿಕ್ಷಣ ದಿಂದ ವಂಚಿತರಾಗುತ್ತಿದ್ದ ಯುವ ಸಮುದಾಯವನ್ನು ಉಚಿತ ಶಿಕ್ಷಣವನ್ನು ನೀಡಿ ಅವರ ಬಾಳಲ್ಲಿ ಬೆಳಕನ್ನು ಚೆಳ್ಳುತ್ತಿರುವ ವಿದ್ಯಾ ಸಂಸ್ಥೆಗಳಾದ ಕೆ ಐ ಸಿ ನೂರುಲ್ ಹುದಾ ಮಾಡನ್ನೂರ್ , ಶಂಸುಲ್ ಉಲಮಾ ತೋಡಾರ್ ಸಂಸ್ಥೆಗಳ ಕಾರ್ಯಕರ್ತರ ಪರಿಶ್ರಮವು ಪ್ರಶಂಸನೀಯವಾಗಿದ್ದು , ಮುಂದೆಯೂ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲಿ ಎಂದು ಶುಭ ಹಾರೈಸಿದರು .
ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಯ್ಯದ್ ಅಸ್ಕರಲಿ ತಂಙಳ್ ರವರು ಮಾತನಾಡಿ ಅನಿವಾಸಿ ದುಬೈ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯು ಇಂದು ತಾಯಿನಾಡಿನ ವಿದ್ಯಾ ಸಂಸ್ಥೆಗಳಾದ ಕರ್ನಾಟಕ ಇಸ್ಲಾಮಿಕ್ ಸೆಂಟರ್ . ನೂರುಲ್ ಹುದಾ ಮಾಡನ್ನೂರ್ ಶಂಸುಲ್ ಉಲಮಾ ತೋಡಾರ್ ಸಂಸ್ಥೆಗಳ ಸಹಯೋಗದೊಂದಿಗೆ ಇಂದು ಮೀಲಾದ್ ಕಾರ್ಯಕ್ರಮದೊಂದಿಗೆ ಯು ಎ ಇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸುತ್ತಿದೆ. ಆದೇಶತೋ ಕುಟುಂಬಗಳ ಆಸರೆಯಾಗಿ, ಹೆತ್ತ ತಾಯಿಯಂತೆ ನಮ್ಮನ್ನು ಪೋಷಿಸಿ , ನಮ್ಮೆಲ್ಲ ಸುಖ ಸಂತೋಷಗಳಲ್ಲಿ ಭಾಗಿಯಾಗುತ್ತಿರುವ ಈ ಯು ಎ ಇ ರಾಷ್ಟ್ರದ ಸರ್ವ ನೇತಾರರಿಗೂ ನಾವೆಲ್ಲರೂ ಅಭಾರಿಯಾಗಬೇಕಾಗಿದ್ದು, ಅವರ ಉದಾರ ಮನಸ್ಥಿತಿಗೆ ಹೃದಯಾಂತರಾಳದ ಅಭಿನಂದನೆಗಳನ್ನು ಸಮರ್ಪಿಸಿದರು. ಅಲ್ಲದೆ ಪುಣ್ಯ ರಸೂಲ್ (ಸ ಅ ) ರ ಜೀವನ ಚರ್ಯೆಗಳನ್ನು ತಾವೆಲ್ಲರೂ ಮೈಗೂಡಿಸಿಕೊಂಡು ಜೀವನ ನಡೆಸುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ , ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ (ಅಧ್ಯಕ್ಷರು ಕೆ ಐ ಸಿ ಕೇಂದ್ರ ಸಮಿತಿ ), ಜನಾಬ್ ಯೂಸುಫ್ ಹಾಜಿ ಬೆರಿಕೆ , ಷರೀಫ್ ಕಾವು (ಅಧ್ಯಕ್ಷರು ನೂರುಲ್ ಹುದಾ ) ಸಲೀಂ ಅಲ್ತಾಫ್ ಫರಂಗಿಪೇಟೆ (ಅಧ್ಯಕ್ಷರು ದಾರುನ್ನೂರ್ ಯು ಎ ಇ) ಅಬ್ದುಲ್ ಖಾದರ್ ಬೈತಡ್ಕ ( ಅಧ್ಯಕ್ಷರು ಶಂಸುಲ್ ಉಲಾಮ ಅಕಾಡೆಮಿ ತೋಡಾರ್ ) , ಜನಾಬ್ ಅಶ್ರಫ್ ಖಾನ್ ಮಾಂತೂರ್ ( ಅಧ್ಯಕ್ಷರು ಕೆ ಐ ಸಿ ದುಬೈ ಸಮಿತಿ ) ಮುಂತಾದವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .
ಸಭಾ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಕಿರಾಅತ್ , ಗಾಯನ ಗಳನ್ನೂ ಆಯೋಜಿಸಿದ್ದು , ಶಮೀರ್ ಪರ್ಲಡ್ಕ ರವರ ನೇತೃತ್ವದಲ್ಲಿ ಆಕರ್ಷಣೀಯ ದಫ್ಫ್ ಪ್ರದರ್ಶನ, ಸಫ್ವಾನ್ ರವರ ನೇತೃತ್ವದಲ್ಲಿ ಬುರ್ಧಾ ಆಲಾಪನೆ ವಿಶೇಷ ಆಕರ್ಷಣೀಯವಾಗಿತ್ತು.
ಕಾರ್ಯಕ್ರಮದಲ್ಲಿಮುಖ್ಯ ಪ್ರಭಾಷಕರಾಗಿ ಆಗಮಿಸಿದ ಹನೀಫ್ ಹುದವಿ ದೇಲಂಪಾಡಿ , ಹಾಗೂ ಇರ್ಷಾದ್ ದಾರಿಮಿ ಉಸ್ತಾದ್ ರವರು ವಿವಿಧ ಸಮಿತಿ ನೇತಾರರು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ದುಬೈ ಎಸ್ ಕೆ ಎಸ್ ಎಸ್ ಎಫ್ ಸಂಘಟನಾ ಕಾರ್ಯದರ್ಶಿ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕರವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿ ನೂರ್ ಮಹಮ್ಮದ್ ನೀರ್ಕಜೆಯವರು ಧನ್ಯವಾದ ವಂಧನಾರ್ಪಣೆ ಗೈದರು.
Comments are closed.