ಮನೋರಂಜನೆ

ಎಮ್ಮೆ ಮೇಯಿಸುತ್ತಿರುವ ನಟಿ ಸಮಂತಾ

Pinterest LinkedIn Tumblr


ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಟಿ ಸಮಂತಾ ಇದೀಗ ಎಮ್ಮೆ ಮೇಯಿಸುತ್ತಿರುವ ಚಿತ್ರ ಈಗ ಸಾಕಷ್ಟು ಹರಿದಾಡುತ್ತಿದೆ. ಇದೇನಿದು ಸಮಂತಾ ಎಮ್ಮೆ ಮೇಯಿಸುತ್ತಿದ್ದಾರೆ? ಎಂದರೆ ಇದು ತೆಲುಗಿನ ‘ರಂಗಸ್ಥಲಂ’ ಚಿತ್ರದ ದೃಶ್ಯ.

ಸದ್ಯಕ್ಕೆ ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಈಗಾಗಲೆ ಚಿತ್ರದ ಪ್ರಚಾರಕಾರ್ಯ ಸಹ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೆ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ. ಸಿನಿಮಾದ ಫೋಟೋಗಳನ್ನು ನೋಡಿದರೆ ಇದೊಂದು ಪಕ್ಕಾ ಡಿಫರೆಂಟ್ ಸ್ಟೋರಿ ಅನ್ನಿಸುತ್ತದೆ.

ಸುಮಾರು 45 ಕೋಟಿ ಬಜೆಟ್‍ನಲ್ಲಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ದೇವಿಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದ್ದು, ಪಾತ್ರವರ್ಗದಲ್ಲಿ ಜಗಪತಿ ಬಾಬು, ಪೂಜಾ ಹೆಗ್ಡೆ, ಗೌತಮಿ ಮುಂತಾದವರು ಇದ್ದಾರೆ. ಈಗಾಗಲೆ ಈ ಚಿತ್ರ ಟಾಲಿವುಡ್‍ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Comments are closed.