ರಾಷ್ಟ್ರೀಯ

ಪತ್ನಿಗೆ ತಲಾಖ್ ನೀಡಿ, ನಾದಿನಿ ಜೊತೆ ಎಸ್ಕೇಪ್ ಆದ ಭೂಪ

Pinterest LinkedIn Tumblr

ಮುಜಾಫ್ಫರ್‌ನಗರ್: ತ್ರಿವಳಿ ತಲಾಖ್ ವಿರುದ್ಧ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿರುವ ಮಧ್ಯೆಯೇ ವರದಕ್ಷಿಣೆ ನೀಡಿಲ್ಲ ಎಂದು ಪತಿರಾಯನೊಬ್ಬ ಪತ್ನಿಗೆ ತಲಾಖ್ ನೀಡಿದ್ದಲ್ಲದೆ, ನಾದಿನಿ ಜೊತೆ ಪಲಾಯನ ಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಸಹಾರಣ್‌ಪುರ ಜಿಲ್ಲೆಯ ಪಠಾಣ್‌ಪುರ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ನೂರ್‌ಜಹಾನ್ ಬೇಗಂ (27) ಅವರು ಪೊಲೀಸರ ಮೊರೆ ಹೋದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ಕಳೆದ ಮೂರು ವರ್ಷಗಳ ಹಿಂದೆ ನೂರ್‌ಜಹಾನ್ ಹಾಗೂ ಅರ್ಷದ್ ಅಹ್ಮದ್‌ರ ವಿವಾಹವಾಗಿದ್ದು, ಈ ಜೋಡಿಗೆ ಒಂದು ಹೆಣ್ಣು ಮಗು ಇದೆ.

‘ವರದಕ್ಷಿಣೆ ತರುವಂತೆ ಪತಿ ಅರ್ಷದ್ ಪದೇ ಪದೇ ಪೀಡಿಸುತ್ತಿದ್ದು, ನನ್ನ ಮನೆಯವರು ಆತನ ಬೇಡಿಕೆಗಳನ್ನು ಈಡೇರಿಸುತ್ತಲೇ ಬಂದಿದ್ದರು. ಆದರೆ, ಡಿಸೆಂಬರ್ 7ರಂದು ಅರ್ಷದ್ ನನ್ನ ಕೊಲೆಗೆ ಯತ್ನಿಸಿದ್ದ. ಅದೃಷ್ಟ ವಶಾತ್ ನೆರೆಹೊರೆಯವರ ಸಹಾಯದಿಂದ ಬಚಾವ್ ಆದೆ. ಬಳಿಕ ಪತಿ ನನಗೆ ತಲಾಖ್ ನೀಡಿ, ತಂಗಿಯ ಜೊತೆ ಎಸ್ಕೇಪ್ ಆಗಿದ್ದಾನೆ’ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಮನವಿ ಮಾಡಿದ್ದೇನೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

Comments are closed.