
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿರುವ ಖ್ಯಾತ ನಟ ಪ್ರಕಾಶ್ ರೈ ಅವರಿಗೆ ಸ್ಯಾಂಡಲ್ ವುಡ್ ನಟ ಒಳ್ಳೆ ಹುಡ್ಗ ಪ್ರಥಮ್ ಸಾಮಾಜಿಕ ತಾಣಗಳಲ್ಲಿ ಬಹಿರಂಗ ಸವಾಲೆಸೆದಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಬಗ್ಗೆ ಸರಣಿ ಹೇಳಿಕೆಗಳನ್ನು ಬಿಡುಗಡೆ ಮಾಡುವ ಸೋ ಕಾಲ್ಡ್ ದೊಡ್ಡ ನಟ ಪ್ರಕಾಶ್ ರೈ ಅವರಿಗೆ ರಾಜ್ಯದ ಹೊನ್ನಾವರದಲ್ಲಿ ನಡೆದ ಕೋಮುಗಲಭೆ ಹಾಗೂ ಪರೇಶ್ ಮೇಸ್ತಾ ಎಂಬ ಯುವಕ ಸಾವು ಕಾಣುವುದಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ.
“ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈ ಅವರಿಗೆ ಬಹಿರಂಗ ಪ್ರಶ್ನೆ, ಏನ್ರೀ ಪ್ರಕಾಶ್ ರಾಜ್ so called ದೊಡ್ಡ ನಟ?!. ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ ಈ ದೇಶದಲ್ಲಿ ಏನಾಗ್ತಿದೆ? ಅದು ಇದು ಅಂತ ಬಾಯಿಗೆ ಬಂದ ಹಾಗೆ ಎಲ್ಲಾ ಕೇಳಿ ಕೊನೆಗೆ ಜಸ್ಟ್ #just_asking ಅಂತಿದ್ರಿ.. ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ. ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ So Called ದೊಡ್ಡ ನಟ (ಭಯಂಕರ)? ನರಕ ಅಂದರೆ ಏನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು.. ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ? ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ್ ರೈ ನಿಮಗೆ? ನಾನು ಹಿಂದು-ಮುಸ್ಲಿಂ ಅಂತ ಮಾತನಾಡುತ್ತಿಲ್ಲ. ಮಾನವೀಯತೆ, ಮನುಷ್ಯತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ಇದು ಬರಿ just asking ಅಲ್ಲ, #purposefully_asking ಎಂದು ತಮ್ಮ ಪೋಸ್ಟ್ ನಲ್ಲಿ ಬರೆದು ಸವಾಲು ಹಾಕಿದ್ದಾರೆ.
Comments are closed.