ತರಕಾರಿ, ಸೊಪ್ಪು ನಾವು ನಿತ್ಯ ತೆಗೆದುಕೊಳ್ಳುವ ಆಹಾರ ಪದಾರ್ಥಗಳ ಭಾಗ. ಅಧಿಕ ಇಳುವರಿಗಾಗಿ ರಸಗೊಬ್ಬರ ಬಳಸುವುದು ಹೆಚ್ಚಾಗಿದೆ. ತರಕಾರಿ ಹೆಚ್ಚು ದಿನ ಕೆಡದಂತೆ ಸಂಗ್ರಹ ಮಾಡಲು ನಾನಾ ರೀತಿಯ ರಾಸಾಯನಿಕಗಳನ್ನು ಬಳಸುತ್ತಾರೆ. ಅವನ್ನು ನೇರವಾಗಿ ತೆಗೆದುಕೊಂಡರೆ ಅನೇಕ ದುಷ್ಪರಿಣಾಮಗಳು ತಪ್ಪಿದ್ದಲ್ಲ. ಆ ರೀತಿ ಅಲ್ಲದೆ ತರಕಾರಿಗಳ ಮೇಲಿನ ಕ್ರಿಮಿನಾಶಕಗಳನ್ನು ಸ್ವಚ್ಛಗೊಳಿಸಲು ವಿವಿಧ ಪದ್ಧತಿಗಳಿವೆ..
ನಮ್ಮಲ್ಲಿ ಬಹಳಷ್ಟು ಮಂದಿ ತಣ್ಣಗಿನ ನೀರಿನಲ್ಲಿ ತರಕಾರಿಗಳನ್ನು ತೊಳೆಯುತ್ತಾರೆ. ತಣ್ಣಗಿನ ನೀರಿನಲ್ಲಿ ಹಾಕಿದರೂ ಅವನ್ನು ಚೆನ್ನಾಗಿ ಸ್ಕ್ರಬ್ ಮಾಡಿದರೇನೆ ತರಕಾರಿಗಳ ಮೇಲಿನ ರಾಸಾಯನಿಕಗಳು ತೊಲಗುತ್ತವೆ…
ತರಕಾರಿ ಮೇಲಿನ ಕ್ರಿಮಿನಾಶಕವನ್ನು ಕ್ಲೀನ್ ಮಾಡಲು ಉಪ್ಪು ನೀರು ನಮಗೆ ಬಹಳಷ್ಟು ಸಹಕಾರಿ. ಉಗುರುಬೆಚ್ಚಗಿನ ನೀರಿನಲ್ಲಿ ಎರಡು ಸ್ಫೂನ್ ಉಪ್ಪು ಹಾಕಿ ಅರ್ಧಗಂಟೆವರೆಗೆ ತರಕಾರಿಯನ್ನು ಅದರಲ್ಲಿ ನೆನೆಸಿ, ಆ ಬಳಿಕ ಬಳಸಿದರೆ ಕ್ರಿಮಿನಾಶಕಗಳು ಸಂಪೂರ್ಣ ತೊಲಗುತ್ತವೆ.
ತರಕಾರಿ ಮೇಲಿನ ಕ್ರಿಮಿನಾಶಕ ತೊಲಗಿಸಲು ವೆನಿಗರ್ ತುಂಬಾ ಉಪಯುಕ್ತ. ಇದಕ್ಕಾಗಿ ನೀವು ಮಾಡಬೇಕಿರುವುದು ಒಂದು ಕಪ್ ವೆನಿಗ ಹಾಕಿ ಆ ನೀರಿನಲ್ಲಿ ತರಕಾರಿಯನ್ನು ನೆನೆಸಿ ಅರ್ಧಗಂಟೆ ಬಳಿಕ ಬಳಸಬೇಕು.
ಹೆಚ್ಚು ಸಮಯ ಇಲ್ಲದವರು ಒಂದು ಸ್ಫೂನ್ ನಿಂಬೆರಸ, ಎರಡು ಸ್ಫೂನ್ ವೆನಿಗರ್, ಒಂದು ಕಪ್ ನೀರಿನಲ್ಲಿ ಬೆರೆಸಿ ಸ್ಪ್ರೇ ಬಾಟಲ್‌ನಲ್ಲಿ ತುಂಬಿಕೊಳ್ಳಬೇಕು. ತರಕಾರಿಯನ್ನು ಹೆಚ್ಚಿಕೊಳ್ಳುವ ಮುನ್ನ ಆ ಮಿಶ್ರಣವನ್ನು ತರಕಾರಿ ಮೇಲೆ ಸ್ಪ್ರೇ ಮಾಡಿ ಕೂಡಲೆ ಕಟ್ ಮಾಡಿಕೊಳ್ಳಬಹುದು.
ಹಣ್ಣಾಗಲಿ, ತರಕಾರಿಯಾಗಲಿ ಮೇಲಿನ ಸಿಪ್ಪೆ ತೆಗೆದು ಬಳಸುವುದು ತುಂಬಾ ಉತ್ತಮವಾದ ಮಾರ್ಗವಾದರೂ ಎಲ್ಲವನ್ನೂ ಆ ರೀತಿ ಬಳಸುವುದು ಸಾಧ್ಯವಾಗಲ್ಲ.

Comments are closed.