
ಮಂಗಳೂರು: ನಗರದ ಖಾಸಗಿ ನರ್ಸಿಂಗ್ ವಿದ್ಯಾರ್ಥಿನಿಯರಿಬ್ಬರು ಪ್ರಯಣಿಸುತ್ತಿದ್ದ ಕಾರೊಂದು ಮರವೂರು ಬಳಿ ನಿರ್ಮಿಸಲಾಗಿರುವ ವೆಂಟೆಡ್ ಡ್ಯಾಂ ಸಮೀಪದ ನದಿಗೆ ಬಿದ್ದ ಘಟನೆ ರವಿವಾರ ಸಂಭವಿಸಿದೆ.
ಕಾರು ಸಮೇತಾ ನದಿಗೆ ಬಿದ್ದ ವಿದ್ಯಾರ್ಥಿನಿಯರನ್ನು ನಿಶಾ ಹಾಗೂ ಪ್ರತೀಕ್ಷಾ ಎಂದು ಗುರುತಿಸಲಾಗಿದ್ದು, ಈ ಇಬ್ಬರು ವಿದ್ಯಾರ್ಥಿನಿಯರನ್ನು ಸ್ಥಳೀಯ ದಾರಿಹೋಕರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮರವೂರು ಬಳಿ ವೆಂಟೆಡ್ ಡ್ಯಾಂ ಇದ್ದು ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಜಾ ದಿನಗಳಲ್ಲಿ ಹೋಗುವುದು ಸಾಮಾನ್ಯ. ಆದರಂತೆ ಸ್ನೇಹಿತನೊಬ್ಬನ ದುಬಾರಿ ಕಾರನ್ನು ಎರವಲು ಪಡೆದು ಚಾಲನೆ ಮಾಡಿಕೊಂಡು ಮರವೂರು ಕಿಂಡಿ ಅಣೆಕಟ್ಟು ನೋಡಲು ವಿದ್ಯಾರ್ಥಿನಿ ಯರು ತೆರಳಿದ್ದರು. ಸ್ವಲ್ಪ ಸಮಯ ಅಲ್ಲೇ ಇದ್ದು, ಬಳಿಕ ಕಾರು ತಿರುಗಿಸಿ ವಾಪಸು ಹೋಗಬೇಕೆನ್ನುವಷ್ಟರಲ್ಲಿ ಏಕಾ ಏಕಿ ನಿಯಂತ್ರಣ ತಪ್ಪಿದ ಕಾರು ಅಲ್ಲಿದ್ದ ನಾಲ್ಕು ಕಂಬಗಳಿಗೆ ಢಿಕ್ಕಿ ಹೊಡೆದು ನೇರ ನದಿಗೆ ಜಾರಿತು.

ಇದಕ್ಕೂ ಮೊದಲು ಕಾರು ಕಂಬಗಳಿಗೆ ಢಿಕ್ಕಿ ಹೊಡೆದ ರಭಸಕ್ಕೆ ಏರ್ ಬ್ಯಾಗ್ ತೆರೆದುಕೊಂಡಿತ್ತು. ನಿಧಾನವಾಗಿ ಕಾರಿನ ಮುಂಭಾಗ ಮುಳುಗತೊಡಗಿದಾಗ ಇಬ್ಬರೂ ಹಿಂಬದಿ ಸೀಟಿನಲ್ಲಿ ಬಂದು ಕುಳಿತಿದ್ದರು.ಈ ಸಂದರ್ಭ ಅದೇ ದಾರಿಯಾಗಿ ಚಹಾ ಕುಡಿಯಲು ಹೋಗುತ್ತಿದ್ದ ಮೂವರು ಯುವಕರು ಕಾರು ಮುಳುಗುತ್ತಿರುವುದನ್ನು ಕಂಡು ನದಿಗೆ ಹಾರಿ ನೀರಿನಲ್ಲಿ ಕಾರಿನೊಳಗಿದ್ದ ವಿದ್ಯಾರ್ಥಿನಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಕಾರು ರಿವರ್ಸ್ ತೆಗೆದು ಇನ್ನೇನು ಹೊರಡ ಬೇಕೆನ್ನುವಷ್ಟರಲ್ಲಿ ತಪ್ಪೆಸಗಿ ಬ್ರೇಕ್ ಒತ್ತುವ ಬದಲು ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾಯಿತು. 10 ಲಕ್ಷ ರೂ. ದುಬಾರಿ ಚೆವರ್ ಲೆಟ್ ಕಾರು ಇದಾಗಿದ್ದರಿಂದ ಏರ್ ಬ್ಯಾಗ್ ತೆರೆದುಕೊಂಡಿತು ಮಾತ್ರವಲ್ಲ ಕಾರೊಳಗ್ಗೆ ನೀರು ನುಗ್ಗಲೂ ಸ್ವಲ್ಪ ಸಮಯ ತಗಲಿದ್ದರಿಂದ ವಿದ್ಯಾರ್ಥಿನಿಯರ ಜೀವ ಉಳಿಯಲು ಸಾಧ್ಯವಾಯಿತು.
Comments are closed.