ಕುಂದಾಪುರ: ಎಲ್ಲರಿಗೂ ಸಮಾನತೆ, ಸಹಬಾಳ್ವೆ, ಆದರ್ಶ ಕಲ್ಪಿಸಿದ ಭಾರತೀಯ ಸಂವಿಧಾನ ಜಗತ್ತಿನ ಶ್ರೇಷ್ಠ ಗ್ರಂಥವಾಗಿದ್ದು, ಎಲ್ಲರಿಗೂ ಸಮಾನ ಅವಕಾಶ ಮಾಡಿಕೊಟ್ಟ ಸಂಮಿಧಾನ ಭಾರತದಲ್ಲಲ್ಲ್ಲದೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಚಿಂತಕ ಜಯನ್ ಮಲ್ಪೆ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಂದಾಪುರ ಶಾಖೆ ಆಶ್ರಯದಲ್ಲಿ ಡಾ.ಅಂಬೇಡ್ಕರ್ ಪರಿನಿರ್ವಾಣ ಹಿನ್ನೆಲೆಯಲ್ಲಿ ತಾಲೂಕ್ ಸರ್ಕಾರಿ ಅಸ್ಪತ್ರೆ ಒಳ ರೋಗಿಗಳಿಗೆ ಹಣ್ಣಹಂಪಲ ವಿತರಣೆ ನಂತರ ಶಾಸ್ತ್ರಿ ವೃತ್ತದಲ್ಲಿ ನಡೆದ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಕಾರ್‍ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.

ಸಂವಿದಾನದ ಬಗ್ಗೆ ಟೀಕೆ ಮಾಡುವವರು ಎಲ್ಲಾ ಕಾಲದಲ್ಲೂ ಇದ್ದರು. ನಮ್ಮನ್ನ ಆಳುವವರು ಸಂವಿಧಾನ ಸರಿಯಾಗಿ ಅರ್ಥೈಸದ ಕಾರಣ ಸಮಾಜವಾದ, ಆರ್ಥಿಕ ಸಮಾನತೆ ತರುವಲ್ಲಿ ಸೋಲಾಗಿದೆ ಎಂದು ಹೇಳಿದರು.
ದಲಿತರ ನಾಶ ಮಾಡಲು ನಡೆಯುತ್ತಿರುವ ಕುತಂತ್ರ ಇಂದು, ನಿನ್ನೆಯದಲ್ಲ. ಶಂಕರಾಚಾರ್ಯ ಕಾಲದಿಂದಿಂದ ಹಿಡಿದು ಅಶೋಕ್ ಚಕ್ರವರ್ತಿವರಗೆ ದಾಳಿಗಳು ನಡೆದೆ ಬಂದಿದ್ದು, ಅದರ ಭಾಗ ಇಂದಿಗೂ ಮುಂದುವರಿದಿದೆ. ಸಂವಿಧಾನ ವಿಮರ್ಶೆ, ತಿದ್ದುಪಡಿ ಹೇಳಿಕೆ ಹಾಸ್ಯಾಸ್ಪದ ಎಂದ ಎಂದರು.
ಕುಂದಾಪುರ ಶಾಖೆ ಸಂಚಾಲಕ ರಾಜು ಬೆಟ್ಟಿನಮನೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮದೂರು, ಜೆಡಿಯು ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್, ಚಂದ್ರ ಹಳಗೇರಿ, ನಗರ ಸಂಚಾಲಕ ಕೃಷ್ಣಮೂರ್ತಿ, ನಗರ ಶಾಖೆ ಮಹಿಳಾ ಒಕ್ಕೂಟ ಸಂಚಾಲಕಿ ಸೀತಾ, ತಾಲೂಕ್ ಸಂಘಟನಾ ಸಂಚಾಲಕಿ ಶಾರದಾ ಕೆದೂರು, ದಲಿತ ಸಂಘರ್ಷ ಸಮಿತಿಯ ಪ್ರಭಾಕರ ವಿ., ಸತೀಶ್ ಬಿರ್ತಿ, ರವಿ ಸುಣ್ಣಾರಿ, ಬೈಂದೂರು ತಾಲೂಕ್ ಸಂಚಾಲಕ ಮಂಜುನಾಥ ನಾಗೂರು ಇದ್ದರು.
Comments are closed.