ತಿನ್ನಲು ಆಹಾರ ದೊರೆಯದೆ ಕಷ್ಟಪಡುವ ಸಮಸ್ಯೆ ಕೆಲವರದ್ದಾದರೆ… ಅಗತ್ಯಕ್ಕಿಂತಲೂ ಹೆಚ್ಚಾಗಿ ತಿಂದವರ ಸಮಸ್ಯೆ ಮತ್ತೊಂದು ರೀತಿಯದ್ದು. ಎಲ್ಲರೂ ಅತಿಯಾಗಿ ಆಹಾರ ಸೇವಿಸುತ್ತಿದ್ದಾರೆಂದಲ್ಲ, ಸರಿಯಾಗಿ ವ್ಯಾಯಾಮ ಮಾಡದಿರುವುದು, ಸಮಯದ ಪರಿವೆಯಿಲ್ಲದೆ ತಿನ್ನುವುದು ಮುಂತಾದ ಕಾರಣಗಳಿಂದ ದೇಹದ ತೂಕ ಹೆಚ್ಚುತ್ತಿದೆ. ಇದು ಸಾಲದೆಂಬಂತೆ, ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡದೆ, ನಾಲಿಗೆಗೆ ರುಚಿಕರವಾದ ಆಹಾರಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಕೆಲಸದಲ್ಲಿ ಹೆಚ್ಚಿದ ಒತ್ತಡ, ಅಧಿಕ ಶರೀರ ಭಾರ, ನೆರಿಗೆ ಬೀಳುತ್ತಿರುವ ಚರ್ಮ … ಒಟ್ಟಾರೆ ಹೇಳಬೇಕೆಂದರೆ…25 ವರ್ಷಕ್ಕೇ 60 ವರ್ಷದವರಂತೆ ಕಾಣುತ್ತಿದ್ದಾರೆ. ಅದೇ 60 ವರ್ಷ ವಯಸ್ಸಿನಲ್ಲಿಯೂ 25 ವರ್ಷದವರಂತೆ ಕಾಣಬೇಕೆಂಬ ಆಸೆ ನಿಮಗಿದೆಯೇ? ಹಾಗಾದರೆ ನಮ್ಮ ಪೂರ್ವೀಕರು ಪಾಲಿಸುತ್ತಿದ್ದ ನಿಯಮ ಉತ್ತಮವೆಂದು ಕಾಣುತ್ತದೆ. ಶರೀರದ ಭಾರ ಇಳಿಸಿಕೊಳ್ಳಲು ಬೆಳಿಗ್ಗೆ ಹಲವು ರೀತಿಯ ನೀರು ಕುಡಿಯುತ್ತಿದ್ದರು. ನಿಂಬೆ ರಸ,ಬಿಸಿನೀರು, ವೆಜಿಟೆಬಲ್ ಜ್ಯೂಸ್, ಫ್ರೂಟ್ ಜ್ಯೂಸ್ …ಹೀಗೆ ಹಲವು ರೀತಿಯ ಜ್ಯೂಸ್ ಗಳನ್ನು ಕುಡಿದು ನಿಮಗೆ ಬೇಸರವಾಗಿದೆಯೇ?
ಹಾಗಾದರೆ…ಈಗ ನಾವು ಹೇಳಲಿರುವ ಅರಶಿನದ ನೀರನ್ನು ಟ್ರೈಮಾಡಿ. ನಿಮ್ಮ ವಯಸ್ಸಿನಲ್ಲಿ ಊಹಿಸಲಾರದಂತಹ ಬದಲಾವಣೆ ಕಂಡು ಬರುತ್ತದೆ. ಉಗುರು ಬೆಚ್ಚಗಿನ ಅರಶಿನದ ನೀರು ಕುಡಿಯುವುದನ್ನು ರೂಡಿಸಿಕೊಳ್ಳಿ. ಇದರಲ್ಲಿ ಆಂಟಿ ಇನ್ ಫ್ಲಮೇಟರಿ ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿ ಇರುವುದರಿಂದ ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದು. ಅರಶಿನದ ನೀರನ್ನು ತಯಾರಿಸುವ ವಿಧಾನ : ಒಂದು ಕಪ್ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಅರಶಿನದ ಪುಡಿ , ಅರ್ಧ ಚಮಚ ಕಾಳು ಮೆಣಸಿನ ಪುಡಿ ಬೆರೆಸಿ. ಇವೆಲ್ಲವನ್ನೂ ಚೆನ್ನಾಗಿ ಬೆರೆಸಬೇಕು. ಹೀಗೆ ಪ್ರತೀದಿನ ತಯಾರಿಸಿಕೊಂಡು ಬೆಳಿಗ್ಗೆ ಕುಡಿಯಬೇಕು. ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು…
ಶರೀರದ ಆರೋಗ್ಯ ಸುಧಾರಿಸುತ್ತದೆ. ಯಾವುದೇ ಅನಾರೋಗ್ಯ ಉಂಟಾಗದಂತೆ ಕಾಪಾಡುತ್ತದೆ.
ಉಗುರು ಬೆಚ್ಚಗಿನ ಅರಶಿನ ನೀರನ್ನು ಸೇವಿಸುವುದರಿಂದ ಟೈಪ್ -2 ಡಯಾಬಿಟೀಸ್ ನಿವಾರಣೆಯಾಗುತ್ತದೆಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ.
ಅರಶಿನ ಲಿವರ್ ಗೆ ಬಹಳ ಒಳ್ಳೆಯದು. ಲಿವರನ್ನು ಹಾಳುಮಾಡುವ ವಿಷಪದಾರ್ಥಗಳನ್ನು ತೊಲಗಿಸುತ್ತದೆ.
ಅರಶಿನದಲ್ಲಿರುವ ಆಂಟಿ ಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ಸ್ ಹಾನಿಯಯನ್ನು ನಿವಾರಿಸಿ ವಯಸ್ಸಾಗುವುದನ್ನು ತಡೆಯುತ್ತದೆ.
ಅರಶಿನದ ನೀರನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ…ಜೀರ್ಣಶಕ್ತಿ ಕ್ರಮಬದ್ಧವಾಗುತ್ತದೆ.
ಆಂಟಿ ಇನ್ ಫ್ಲಮೇಟರಿಯಾಗಿ ಅರಶಿನ ಕೆಲಸಮಾಡುತ್ತದೆ.
ಅರಶಿನದಲ್ಲಿರುವ ಕರ್ಕೂಮಿನ್ ಅಂಶ ರಕ್ತ ಹೆಪ್ಪುಗಟ್ಟಿರುವುದನ್ನು ನಿವಾರಿಸುತ್ತದೆ. ಆದುದರಿಂದ ಕ್ರಮಬದ್ದವಾಗಿ ಅರಶಿನ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಅರಶಿನದಲ್ಲಿರುವ ಆಂಟಿ ಇನ್ ಪ್ಲಮೇಟರಿ ಗುಣಗಳಿಂದಾಗಿ..ಊತ, ಕೀಲು ನೋವು ಕಡಿಮೆಯಾಗುತ್ತದೆ.

Comments are closed.