Uncategorized

ನನಗೆ ಮದುವೆಯಾದರೆ ನಿಮಗೇನು ಲಾಭ: ಸಲ್ಮಾನ್ ಖಾನ್

Pinterest LinkedIn Tumblr


ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮದುವೆ ವಯಸ್ಸು ಮೀರಿ ಬಹಳಷ್ಟು ಸಮಯವಾಗಿದೆ. ಆದರೂ ಆಗಾಗ ಅವರಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಸಲ್ಲು ಭಾಯ್ ನೀವು ಯಾವಾಗ ಮದುವೆಯಾಗುತ್ತೀರ? ಇಷ್ಟಕ್ಕೂ ಮದುವೆಯಾಗುತ್ತೀರ ಇಲ್ಲವೇ? ಎಂದು ಕೇಳುತ್ತಿರುತ್ತಾರೆ.

ಶೀಘ್ರದಲ್ಲೇ ‘ಟೈಗರ್ ಜಿಂದಾ ಹೈ’ ಚಿತ್ರದ ಮೂಲಕ ಸಲ್ಮಾನ್ ಖಾನ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾನೆ. ಈ ಚಿತ್ರದ ಪ್ರಚಾರ ಕಾರ್ಯಕ್ರಮ ಮಂಗಳವಾರ ಮುಂಬೈನಲ್ಲಿ ನಡೆಯಿತು. ಸಲ್ಮಾನ್ ವೇದಿಕೆಗೆ ಬಂದ ಕೂಡಲೆ ಅಭಿಮಾನಿಗಳಿಂದ ಮದುವೆ ಬಗ್ಗೆಯೇ ಹೆಚ್ಚಾಗಿ ಪ್ರಶ್ನೆಗಳು ತೂರಿಬಂದವು.

ಆ ಪ್ರಶ್ನೆಗಳಿಗೆ ಉತ್ತರಿಸಿದ ಸಲ್ಮಾನ್ ಖಾನ್, ‘ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನೀವೆಲ್ಲಾ ನನ್ನ ಮದುವೆ ಬಗ್ಗೆ ಯೋಚಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಆದರೆ ನನಗೊಂದು ವಿಷಯ ಅರ್ಥವಾಗುತ್ತಿಲ್ಲ. ನನಗೆ ಮದುವೆಯಾದರೆ ನಿಮಗಾಗುವ ಲಾಭವಾದರೂ ಏನು? ಮಾಡಿಕೊಳ್ಳುತ್ತೇನೆ ಎಂದೂ ಹೇಳಿಲ್ಲ. ಮಾಡಿಕೊಳ್ಳಲ್ಲ ಎಂದೂ ಇಲ್ಲ. ಸಮಯ ಬಂದಾಗ ಆಗುತ್ತದೆ. ಇಲ್ಲದಿದ್ದರೆ ಇಲ್ಲ. ಆದರೆ ನಾನು ಮಾತ್ರ ತುಂಬಾ ಸಂತೋಷವಾಗಿದ್ದೇನೆ’ ಎಂದಿದ್ದಾರೆ.

ಸಲ್ಮಾನ್ ಖಾನ್, ಕತ್ರಿಕಾ ಕೈಫ್ ಜೋಡಿಯಾಗಿರುವ ‘ಟೈಗರ್ ಜಿಂದಾ ಹೈ’ ಚಿತ್ರ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಸಲ್ಮಾನ್ ಖಾನ್ ನಾಯಕ ನಟನಾಗಿ ‘ರೇಸ್ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಸಲ್ಲುಗೆ ಜೋಡಿಯಾಗಿ ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯಿಸುತ್ತಿದ್ದಾರೆ.

Comments are closed.