ಕರ್ನಾಟಕ

ಪತಿಯ ಲೈಂಗಿಕ ನಿರಾಸಕ್ತಿ: ಪ್ರಿಯಕರನ ಕೈಲಿ ಕೊಲೆ ಮಾಡಿಸಿದ ಪತ್ನಿ

Pinterest LinkedIn Tumblr


ಬೆಂಗಳೂರು: ಪತಿ ತನ್ನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿಲ್ಲ ಎಂದು ಪತ್ನಿಯೇ ಆತನನ್ನು ಕೊಲೆ ಮಾಡಿಸಿ ನಾಪತ್ತೆಯಾಗಿರುವುದಾಗಿ ದೂರು ಕೊಟ್ಟಿರುವುದು ಪತ್ತೆಯಾಗಿದೆ.

ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿ 27 ವರ್ಷದ ನೀಲಾ ಎಂಬಾಕೆಯನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆ ನೀಲಾಗೆ ಪ್ರದೀಪ್ ಎಂಬಾತನ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಗಂಡ ಮಧುಸೂದನ್‌ನನ್ನು ಮುಗಿಸಲು ಪ್ರಿಯಕರ ಪ್ರದೀಪ್ ಜತೆ ಸಂಚು ರೂಪಿಸಿದ್ದಳು.

ಅಕ್ಟೋಬರ್ ಹನ್ನೆರಡರಂದು ರಾತ್ರಿ ಮಧುಸೂದನ್‌ನನ್ನುಕ್ಯಾಂಟರ್ ನಲ್ಲಿ ಕರೆದೊಯ್ದಿದ್ದ ಪ್ರದೀಪ್‌ ದಾರಿ ಮಧ್ಯೆ ಸ್ನೇಹಿತರಾದ ರಂಜಿತ್‌ ಮತ್ತು ಹರಿಪ್ರಸಾದ್‌ನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡಿದ್ದ ಪ್ರದೀಪ್ ಚೆನ್ನಾಗಿ ಕುಡಿಸಿ ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಟರ್ ನಿಲ್ಲಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆರೋಪಿಗಳು ಮೃತದೇಹವನ್ನು ಕೆಂಗೇರಿ ಬಳಿಯ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು.

ನೀಲಾಗೆ ಕರೆ ಮಾಡಿದ್ದ ಪ್ರದೀಪ್ ನಿನ್ನ ಗಂಡನ ಕಥೆ ಕ್ಲೋಸ್ ಮಾಡಿದ್ದೇವೆ ಅಂದಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ಕಾಣಿಸುತ್ತಿಲ್ಲ ಎಂದು ದೂರು ಕೊಟ್ಟಿದ್ದಳು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಗಂಡ ನಾಲ್ಕು ವರ್ಷದಿಂದ ಜತೆಯಲ್ಲಿ ಲೈಂಗಿಕತೆ ನಡೆಸುತ್ತಿಲ್ಲ. ಹೀಗಾಗಿ ಕೊಲೆ ಮಾಡಿಸಿದೆ ಎಂದ ಆರೋಪಿ ನೀಲಾ ಹೇಳಿದ್ದಾಳೆ.

Comments are closed.