ರಾಷ್ಟ್ರೀಯ

ಭಾರತದ ವಿರುದ್ಧ ಚೀನಾ ‘ಕುರಿಗಾಹಿಗಳ’ ಅಸ್ತ್ರ!

Pinterest LinkedIn Tumblr


ನವದೆಹಲಿ: ಡೋಕ್ಲಾಂ ವಿವಾದದ ನಂತರ ಪೆಟ್ಟು ತಿಂದ ಹಾವಿನಂತಾಡುತ್ತಿರುವ ನೆರೆಯ ಚೀನಾ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತಕ್ಕೆ ಏಟು ನೀಡಲು ಹೊಂಚು ಹಾಕಿದೆ.

ಇದೀಗ ಹೊಸದಾಗಿ ಬೆಳಕಿಗೆ ಬಂದಿರುವ ಅಂಶವೆಂದರೆ ಚೀನಾ ಭಾರತ ಗಡಿ ಭಾಗದಲ್ಲಿ ಕುರಿಗಾಹಿಗಳನ್ನೇ ಬೇಹುಗಾರರಾಗಿ ನೇಮಿಸಿ ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ಮುಂದಾಗಿದೆ. ಎರಡನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರಿಯುತ್ತಿರುವ ಕ್ಸಿನ್ ಜಿನ್ ಪಿಂಗ್ ಗಡಿಯಲ್ಲಿ ನಿಂತು ಚೀನಾ ನೆಲ ರಕ್ಷಿಸಲು ಮುಂದಾಗಿ ಎಂದು ಕರೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಭಾರತ ಮತ್ತು ಬಾಂಗ್ಲಾದೇಶಕ್ಕೂ ನೀರು ಒದಗಿಸುವ ಬ್ರಹ್ಮ ಪುತ್ರಾ ನದಿಗೆ 1 ಸಾವಿರ ಕಿ.ಮೀ. ಉದ್ದದ ಸುರಂಗ ಕೊರೆಯುವ ಯೋಜನೆಗೆ ಚೀನಾ ಮುಂದಾಗಿದೆ. ಇದರಿಂದಾಗಿ ಭಾರತ ಮತ್ತು ಬಾಂಗ್ಲಾದೇಶಕ್ಕೆ ನೀರು ಸಿಗದಂತೆ ಮಾಡುವ ಹುನ್ನಾರ ನಡೆಸಿದೆ ಎನ್ನಲಾಗಿದೆ. ಚೀನಾ ಈ ರೀತಿ ಮಾಡಿದರೆ ಚೀನಾ ಗಡಿಗೆ ತಾಗಿಕೊಂಡಿರುವ ಭಾರತ ಹಲವು ರಾಜ್ಯಗಳಿಗೆ ಅಗತ್ಯ ನೀರಿನ ಕೊರತೆ ಎದುರಾಗಲಿದೆ.

Comments are closed.