ರಾಷ್ಟ್ರೀಯ

ರಾಹುಲ್‌ ಗಾಂಧಿಯನ್ನು ಭೇಟಿಯಾಗಲ್ಲ : ಜಿಗ್ನೇಶ್‌ ಮೇವಾನಿ

Pinterest LinkedIn Tumblr


ಗಾಂಧಿನಗರ : ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ನಾನು ಭೇಟಿಯಾಗಲಿದ್ದೇನೆ ಎಂಬ ವರದಿಗಳು ಸುಳ್ಳು ಎಂದು ಗುಜರಾತ್‌ ದಲಿತ ನಾಯಕ ಜಿಗ್ನೇಶ್‌ ವೇವಾನಿ ಹೇಳಿದ್ದಾರೆ.

“ಒಂದು ವೇಳೆ ನಾನು ರಾಹುಲ್‌ ಗಾಂಧಿಯನ್ನು ಭೇಟಿಯಾದರೂ ನನ್ನ ಸ್ವಂತ ಲಾಭಕ್ಕಾಗಿ ಭೇಟಿಯಾಗುವುದಿಲ್ಲ; ಬದಲು ದಲಿತರ ಬಗ್ಗೆ ಕಾಂಗ್ರೆಸ್‌ ನಿಲುವೇನು ಎಂಬುದನ್ನು ತಿಳಿಯುವುದಷ್ಟೇ ನನ್ನ ಭೇಟಿಯ ಉದ್ದೇಶವಾಗಿರುತ್ತದೆ’ ಎಂದು ಜಿಗ್ನೇಶ್‌ ಹೇಳಿದ್ದಾರೆ.

ನಾಳೆ ಬುಧವಾರದಿಂದ ರಾಹುಲ್‌ ಗಾಂಧಿ ಗುಜರಾತ್‌ ಚುನಾವಣಾ ಪ್ರಚಾರಾರ್ಥ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದು ಈ ಸಂದರ್ಭದಲ್ಲಿ ರಾಹುಲ್‌ – ಜಿಗ್ನೇಶ್‌ ಭೇಟಿಯನ್ನು ಇನ್ನೂ ಗೊತ್ತುಪಡಿಸಲಾಗಿಲ್ಲ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.

ಈ ನಡುವೆ ಕ್ಷತ್ರಿಯ – ರಾಜಪೂತ ಸಮುದಾಯದ ಪ್ರಮುಖ ನಾಯಕ ಅಲ್‌ಪೇಶ್‌ ಠಾಕೂರ್‌ ಅವರು ಡಿಸೆಂಬರ್‌ನಲ್ಲಿ ನಡೆಯುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

-ಉದಯವಾಣಿ

Comments are closed.