ರಾಷ್ಟ್ರೀಯ

ತಾಜ್ ಮಹಲ್ ಆಯ್ತು.. ಈಗ ಮತ್ತೊಂದು ಐತಿಹಾಸಿಕ ಮಸೀದಿಗೆ ಯುಪಿ ಪ್ರವಾಸೋದ್ಯಮ ಪಟ್ಟಿಯಿಂದ ಗೇಟ್ ಪಾಸ್

Pinterest LinkedIn Tumblr


ಲಖನೌ: ಉತ್ತರ ಪ್ರದೇಶ ಸರ್ಕಾರದ ಪ್ರವಾಸೋಧ್ಯಮ ಪಟ್ಟಿಯಿಂದ ಐತಿಹಾಸಿಕ ತಾಜ್ ಮಹಲ್ ಅನ್ನು ಕೈಬಿಟ್ಟ ವಿವಾದ ಇನ್ನೂ ಹಸಿರಾಗಿರುವ ಹೊತ್ತಿನಲ್ಲೇ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಮತ್ತೊಂದು ಐತಿಹಾಸಿಕ ಮಸೀದಿಯನ್ನು ಪ್ರವಾಸೋಧ್ಯಮ ಪಟ್ಟಿಯಿಂದ ಕೈ ಬಿಟ್ಟಿದೆ.

ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿರುವ ಐತಿಹಾಸಿಕ ಮಸೀದಿ ‘ಅಸಾಫಿ ಇಮಾಂಬರಾ’ ಅಥವಾ ‘ಬಡಾ ಇಮಾಂಬರಾ’ವನ್ನು ಇದೀಗ ಪ್ರವಾಸೋಧ್ಯಮ ಪಟ್ಟಿಯಿಂದ ಕೈ ಬಿಡಲಾಗಿದೆ. ಕೇವಲ ಪ್ರವಾಸೋಧ್ಯಮ ಪಟ್ಟಿಯಷ್ಟೇ ಅಲ್ಲ.. ಉತ್ತರ ಪ್ರದೇಶದ ಸರ್ಕಾರ ಹೊರಡಿಸಿರುವ 2018ರ ವಾರ್ಷಿಕ ಕ್ಯಾಲೆಂಡರ್ ನಲ್ಲೂ ಐತಿಹಾಸಿಕ ಕಟ್ಟಡಕ್ಕೆ ಸ್ಥಾನ ಕಲ್ಪಿಸಿಲ್ಲ. ಇದೇ ಮೊದಲ ಬಾರಿಗೆ ಐತಿಹಾಸಿಕ ಕಟ್ಟಡವನ್ನು ಸರ್ಕಾರದ ಕ್ಯಾಲೆಂಡರ್ ನಿಂದ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದ ಆಗಮಿಸುವ ಪ್ರವಾಸಿದರು ಆಗಮಿಸಿ ನೋಡಲೇ ಬೇಕಾದ ಪ್ರವಾಸಿ ತಾಣಗಳಲ್ಲಿ ಪಟ್ಟಿಯಲ್ಲಿ ತಾಜ್ ಮಹಲ್ ನಂತೆಯೇ ಬಡಾ ಇಮಾಂಬರಾ ಕೂಡ ಪ್ರಮುಖವಾದದ್ದು. ಹೀಗಿದ್ದೂ ಉತ್ತರ ಪ್ರದೇಶ ಬಡಾ ಇಮಾಂಬರವನ್ನು ಪ್ರವಾಸೋಧ್ಯಮಪಟ್ಟಿಯಿಂದ ಕೈಬಿಟ್ಟಿರುವುದು ಪ್ರವಾಸಿಗರು ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಪ್ರಸ್ತುತ ಸುದ್ದಿಗೆ ಗ್ರಾಸವಾಗಿರುವ ಬಡಾ ಇಮಾಂಬರ ಮಸೀದಿಯನ್ನು 1784ರಲ್ಲಿ ಲಖನೌನಲ್ಲಿ ಅವಧ್ ಪ್ರಾಂತ್ಯದ ನವಾಬ ಅಸಫ್ ಉದ್ ದೌಲಾ ಎಂಬಾತ ನಿರ್ಮಿಸಿದ್ದ ಎಂದು ಇತಿಹಾಸದಿಂದ ತಿಳಿದುಬಂದಿದೆ. ಇದೇ ನವಾಬ ತನ್ನ ಆಡಳಿತ ವ್ಯಾಪ್ತಿಯಲ್ಲಿದ್ದ ಗೋರಖ್ ಪುರ ಪ್ರದೇಶವನ್ನು ಹಿಂದೂಗಳಿಗಾಗಿ ಸೌಹಾರ್ಧತೆಯ ಪ್ರತೀಕವಾಗಿ ದಾನ ಮಾಡಿದ್ದನಂತೆ. ಅಂದು ಈ ನವಾಬ ದಾನ ಮಾಡಿದ್ದ ಗೋರಖ್ ಪುರ ಪ್ರದೇಶದಲ್ಲಿ ಇಂದು ಗೋರಖ್ ನಾಥ್ ಮಠ ತಲೆ ಎತ್ತಿದೆ.

ಸಿಎಂ ಯೋಗಿ ಆದಿತ್ಯಾ ನಾಥ್ ಅವರು ಈ ಮಠವನ್ನು ಪ್ರವಾಸೋಧ್ಯಮ ಪಟ್ಟಿಗೆ ಸೇರಿಸಿದ್ದು, ಈ ಪ್ರದೇಶವನ್ನು ಹಿಂದೂಗಳಿಗೆ ದಾನ ಮಾಡಿದ್ದ ನವಾಬ ನಿರ್ಮಿಸಿದ್ದ ಬಡಾ ಇಮಾಂಬರ ಮಸೀದಿಯನ್ನು ಪಟ್ಟಿಯಿಂದ ಬಿಟ್ಟಿರುವುದ ಸರಿಯಲ್ಲ ಎಂದು ಪ್ರವಾಸಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.