ಕ್ರೀಡೆ

200ನೇ ಏಕದಿನ ಪಂದ್ಯ ಆಡಿ ದಿಗ್ಗಜರ ದಾಖಲೆ ಮುರಿದ ವಿರಾಟ್‌ ಕೊಹ್ಲಿ ! ಸಚಿನ್, ಎಬಿಡಿ, ಗೇಯ್ಲ್‌ಗಿಂತ ಕೊಹ್ಲಿಯೇ ನಂ.1

Pinterest LinkedIn Tumblr

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದು ಈ ಹಿಂದಿನ ಆಟಗಾರರ ಎಲ್ಲಾ ದಾಖಲೆಗಳನ್ನು ಕೊಹ್ಲಿ ಮೀರಿ ನಂಬರ್ 1 ಆಟಗಾರ ಎನಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ 200ನೇ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ 14ನೇ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಇನ್ನು ಈ ಹಿಂದೆ 199 ಪಂದ್ಯಗಳನ್ನು ಆಡಿದ್ದ ಕ್ರಿಕೆಟ್ ದಿಗ್ಗಜರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರಿಕ್ಕಿ ಪಾಂಟಿಂಗ್, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಯ್ಲ್ ಗಿಂತ ವಿರಾಟ್ ಕೊಹ್ಲಿ ಎಲ್ಲಾ ಅಂಕಿ ಅಂಶಗಳಲ್ಲೂ ನಂಬರ್ 1 ಸ್ಥಾನದಲ್ಲಿ ನಿಲ್ಲುತ್ತಾರೆ.

199 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 55.13ರ ಸರಾಸರಿಯಲ್ಲಿ 8767 ರನ್ ಸಿಡಿಸಿದ್ದಾರೆ. 30 ಶತಕ ಹಾಗೂ 45 ಅರ್ಧಶತಕ ಗಳಿಸಿದ್ದಾರೆ. ಇತರೆ ಆಟಗಾರರಿಗೆ ಹೋಲಿಸಿದರೆ ರನ್ ಗಳಿಕೆ, ಬ್ಯಾಟಿಂಗ್ ಸರಾಸರಿ, ಶತಕಗಳ ಸಂಖ್ಯೆಯಲ್ಲಿ ಕೊಹ್ಲಿಯೇ ಮುನ್ನಡೆ ಕಾಯ್ದುಕೊಂಡಿದ್ದಾರೆ.

Comments are closed.