ಕ್ರೀಡೆ

ಬಿಗ್‌ಬಾಷ್‌ ಟಿ20ಯಲ್ಲೇ ಗರಿಷ್ಠ ಮೊತ್ತ ಪಡೆದ ಕ್ರಿಸ್‌ ಲಿನ್‌!

Pinterest LinkedIn Tumblr


ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲೀನ್‌ ಬಿಗ್‌ಬಾಷ್‌ನ ಬ್ರಿಸ್ಬೇನ್‌ ಹೀಟ್ಸ್‌ ಫ್ರಾಂಚೈಸಿ ಜತೆ 5 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು 6.4 ಕೋಟಿ ರೂ.ಗೆ ಪಡೆದುಕೊಳ್ಳಲಿದ್ದಾರೆ.

ವಿಶೇಷವೆಂದರೆ ಇದು ಬಿಗ್‌ಬಾಷ್‌ ಇತಿಹಾಸದಲ್ಲಿಯೇ ಆಟಗಾರನೊಬ್ಬನಿಗೆ ನೀಡಿದ ಗರಿಷ್ಠ ಮೊತ್ತ! ಆದರೆ ಐಪಿಎಲ್‌ನಲ್ಲಿ ಬರೀ ಒಂದು ವರ್ಷದ ಅವಧಿಗೆ ಗರಿಷ್ಠ 16 ಕೋಟಿ ರೂ. ನೀಡಿದ ದಾಖಲೆಯಿದೆ. ಯುವರಾಜ್‌ ಸಿಂಗ್‌ ಈ ದಾಖಲೆ ಮಾಡಿದ್ದಾರೆ. ಪ್ರತಿಷ್ಠಿತ ಟಿ20 ಕ್ರಿಕೆಟ್‌ ಲೀಗ್‌ಗಳಲ್ಲಿ ಒಂದಾದ ಆಸ್ಟ್ರೇಲಿಯಾದ ಬಿಗ್‌ಬಾಷ್‌ ಆರಂಭವಾಗಿದ್ದು, 2011ರಲ್ಲಿ. ಅಂದಿನಿಂದ ಕ್ರಿಸ್‌ ಲಿನ್‌ ಬ್ರಿಸ್ಬೇನ್‌ ಹೀಟ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷ ಮತ್ತೆ ಅವರ ಒಪ್ಪಂದದ ಅವಧಿಯನ್ನು ವಿಸ್ತರಿಸಲಾಗಿದೆ.

ಅದೇ ರೀತಿ ಇದೇ ಫ್ರಾಂಚೈಸಿ ಮುಖ್ಯ ಕೋಚ್‌ ಆಗಿ ಡೇನಿಯಲ್‌ ವೆಟ್ಟೋರಿ, ಸಹಾಯಕ ಕೋಚ್‌ ಆಗಿ ಶೇನ್‌ ಬಾಂಡ್‌ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ಒಪ್ಪಂದದ ಅವಧಿಯನ್ನು ಮುಂದುವರಿಸಿದೆ.

-ಉದಯವಾಣಿ

Comments are closed.