ಕರ್ನಾಟಕ

ಆಸ್ಪತ್ರೆಯಿಂದ ಹೊರ ಬಂದು ಮಾಧ್ಯಮಗಳ ವಿರುದ್ಧ ಕಿಡಿಗಾರಿದ ಅಗ್ನಿ ಶ್ರೀಧರ್‌!

Pinterest LinkedIn Tumblr


ಬೆಂಗಳೂರು: ‘ರಾಜ್ಯದಲ್ಲಿ ಮಾಧ್ಯಮಗಳು ಇವೆಯಾ?. ನಾನು ರಾಜಕಾರಿಣಿ ಅಲ್ಲ. ನಾಟಕ ಆಡುವ ಬುದ್ಧಿ ಇಲ್ಲ. ಮೂರು ದಿನದಿಂದ ನಿದ್ದೆ ಮಾಡಿಲ್ಲ. ಯಾರ ಮರ್ಜಿಯೂ ನನಗಿಲ್ಲ’ ಎಂದು ಪತ್ರಕರ್ತ ಅಗ್ನಿ ಶ್ರೀಧರ್‌ ಮಾಧ್ಯಮಗಳ ವಿರುದ್ಧ ವಾಗ್ದಾಳಿ ಮಾಡಿದರು.

ಆರೋಪಿಗಳಿಗೆ ಆಶ್ರಯ ನೀಡಿದ್ದ ಅನುಮಾನದ ಮೇಲೆ ಪತ್ರಕರ್ತ ಅಗ್ನಿ ಶ್ರೀಧರ್ ಹಾಗೂ ಅವರ ಸಹಚರ ಸೈಯದ್ ಅಮಾನ್ ಅಲಿಯಾಸ್ ಬಚ್ಚನ್ ಅವರ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದ ನಗರ ಪೂರ್ವ ವಿಭಾಗದ ಪೊಲೀಸರು, ನಾಲ್ಕು ರಿವಾಲ್ವರ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದರು. ದಾಳಿ ವೇಳೆ ಎದೆ ನೋವು ಎಂದು ಕುಸಿದು ಬಿದ್ದ ಶ್ರೀಧರ್ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಕುಮಾರಸ್ವಾಮಿ ಲೇಔಟ್‌ ಠಾಣೆ ವ್ಯಾಪ್ತಿಯ ಸಾಗರ್‌ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಆಸ್ಪತ್ರೆಯಿಂದ ಹೊರಬಂದ ಬಳಿಕ ಎದುರಾದ ಮಾಧ್ಯಮದವರನ್ನು ಕಂಡು ಹರಿಹಾಯ್ದರು.

‘ಕಪಾಳ ಮೋಕ್ಷ ‘307‘ ಆಗುತ್ತೆ ಎಂಬ ಸಾಮಾನ್ಯ ಜ್ಞಾನವೂ ಮಾಧ್ಯಮಗಳಿಗಿಲ್ಲ. ನನ್ನನ್ನು ರೌಡಿ ಶೀಟರ್‌ ಎಂದು ಬಿಂಬಿಸಿದ್ದೀರಿ.

‘ನನ್ನನ್ನು ರಾಜಕಾರಿಣಿ ಎಂದುಕೊಂಡಿದ್ದೀರಾ. ಅಧಿಕಾರಿಗಳನ್ನು, ರಾಜಕಾರಿಣಿಗಳನ್ನು ಎದುರಿಸಿದ ರೀತಿ ಎದುರಿಸಬಹುದು ಎಂದುಕೊಂಡಿದ್ರಾ.

‘ಅಗ್ನಿ ಶೀಧರ, ಐಸ್ಟ್ ಶ್ರೀಧರ, ರೌಡಿ ಶ್ರೀಧರ ಇವೆಲ್ಲಾ ಸೋಷಿಯಲ್‌ ಕನ್‌ಸ್ಟ್ರಕ್ಟ್‌ಗಳು. ಯಾವ ಮೀಡಿಯಾದವರು ನೀವೆಲ್ಲಾ?. ಆ ಇದನ್ನೆಲ್ಲ ಹೊಡೆದಾಕಿದ್ದೆ ನಾನು. ಸಣ್ಣ ದೀಪವಾಗಿದ್ದೆ. ದೊಡ್ಡ ಜ್ವಾಲೆ ಮಾಡಿಟ್ರಿ. ದೊಡ್ಡ ಜ್ವಾಲೆ ಮಾಡಿದ್ದು ಪೊಲೀಸರಲ್ಲ; ಮಾಧ್ಯಮಗಳು ಅಂತ ಹೇಳುತ್ತಾರಲ್ಲ ಅವರುಗಳು’ ಎಂದು ಅಸಮಾಧಾನ ಹೊರ ಹಾಕಿದ ಶ್ರೀಧರ್‌, ನಾಳೆ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದರು.

Comments are closed.