
ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಅಲಾಸ್ಟೇರ್ ಕುಕ್ ಅವರು ಸೋಮವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 59 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ನಾಯಕ ಸ್ಥಾನ ನಿರ್ವಹಿಸಿದ್ದು, ಇದು ‘ಒಂದು ದುಖಃದ ದಿನ’ ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಕುಕ್ 11, 057 ರನ್ ಗಳಿಸಿದ್ದು, 2012ರ ಆಗಸ್ಟ್‌ನಲ್ಲಿ ಕುಕ್ ಇಂಗ್ಲೆಂಡ್ ತಂಡ ನಾಯಕತ್ವ ವಹಿಸಿಕೊಂಡ ಬಳಿಕ 2013ರಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿ ಹಾಗೂ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಜಯಿಸಿತ್ತು.
32 ವರ್ಷದ ಕುಕ್ ಮಾತನಾಡಿ, ಐದು ವರ್ಷದ ಅವಧಿಯಲ್ಲಿ ಕ್ರಿಕೆಟ್ ತಂಡವನ್ನು ಮುನ್ನಡೆಸಲು ದೊರೆತ ಅವಕಾಶ ದೊಡ್ಡ ಗೌರವ ತಂದಿದೆ ಎಂದಿದ್ದಾರೆ.
‘ನನ್ನ ನಿರ್ಧಾರದಿಂದ ತಂಡಕ್ಕೆ ತಕ್ಕ ಮಟ್ಟಿನ ಹಿನ್ನಡೆಯಾಗುತ್ತದೆ ಎಂಬುದರ ಅರಿವಿದೆ. ಆದರೆ, ಪ್ರಸ್ತುತದ ಪರಿಸ್ಥಿತಿಯಲ್ಲಿ ನನ್ನ ನಿರ್ಧಾರ ಸರಿಯಾಗಿದೆ ಎಂದು ಭಾವಿಸಿದ್ದೇನೆ’ ಎಂದು ಕುಕ್ ಹೇಳಿದ್ದಾರೆ.
ಕುಕ್ ವಿದಾಯದ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಕಾಲಿನ್ ಗ್ರೇವ್ಸ್, ‘ಕುಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ತಂಡ ಆಟಗಾರನಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.
‘ಇಂದು ನನಗೆ ವೈಯಕ್ತಿಕವಾಗಿ ಹಲವು ರೀತಿಗಳಿಂದ ದುಖಃದ ದಿನ ಎನಿಸುತ್ತದೆ. ನಾಯಕತ್ವದ ಅವಧಿಯಲ್ಲಿ ನನಗೆ ಸಹಕರಿಸಿದ ತರಬೇತುದಾರರು, ಸಿಬ್ಬಂದಿ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಕುಕ್ ಟೆಸ್ಟ್ ತಂಡದ ‘ಅದ್ಭುತವಾದ ಸುಧಾರಣೆಗೆ’ ಕಾರಣರಾಗಿದ್ದರು ಎಂದು ಇಂಗ್ಲೆಂಡ್ ತಂಡ ನಿರ್ದೇಶಕ ಆಂಡ್ರ್ಯೂಸ್ಟ್ರಾಸ್ ತಿಳಿಸಿದ್ದಾರೆ.
2016ರ ಭಾರತ–ಇಂಗ್ಲೆಂಡ್ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕುಕ್ ಪಡೆ ಸೋಲು ಅನುಭವಿಸಿತ್ತು.
Comments are closed.