
ಬೆಂಗಳೂರು, ಫೆ.೨: ವಿಧಾನಸೌಧದ ಆವರಣದಲ್ಲಿ ಇದೀಗ ನಾಗರಹಾವು ಕಾಣಿಸಿಕೊಂಡಿದೆ. ಉತ್ತರ ಗೇಟ್ನ ಲಾನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಜನ ಸೇರಿದ ಕೂಡಲೇ ಹಾವು ಬಿಲದ ಒಳಗಡೆ ಸೇರಿಕೊಂಡಿತು.
ಈ ಹಿಂದೆ ಕಾಗೆ ಗೂಬೆ ವಿಧಾನಸೌಧದ ಮೇಲೆ ಕೂತಿತ್ತು. ಇದೀಗ ಹಾವು ಬಂದಿದೆ.
ಹಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯನವರ ಫಾರ್ಚುನರ್ ಕಾರು ಮೇಲೆ ಕಾಗೆಯೊಂದು ಕುಳಿತುಕೊಂಡಿತ್ತು. ಎರಡು ವಾರದ ಹಿಂದೆ ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ಬಂದಿತ್ತು. ಈ ಮೂರು ವಿಚಾರದ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡುತ್ತಿದ್ದರು. ಈಗ ಈ ಚರ್ಚೆಗೆ ನಾಗರಹಾವು ವಿಷಯ ಹೊಸದಾಗಿ ಸೇರ್ಪಡೆಯಾಗಿದೆ.
ಕರ್ನಾಟಕ
Comments are closed.