ರಾಷ್ಟ್ರೀಯ

ಜಲ್ಲಿಕಟ್ಟು ನಡೆಸಲು ರಾಜ್ಯಪಾಲರಿಂದ ಸುಗ್ರೀವಾಜ್ಞೆ

Pinterest LinkedIn Tumblr
16

ನವದೆಹಲಿ: ಗೂಳಿ ಪಳಗಿಸುವ ಕ್ರೀಡೆ ಜಲ್ಲಿಕಟ್ಟು ನಡೆಸುವಂತೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ಶನಿವಾರ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ತಮಿಳುನಾಡಿನಾದ್ಯಂತ ನಾಳೆ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದೆ ಎಂದು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಹೇಳಿದ್ದಾರೆ.

Ordinance promulgated today by TN Government, Jallikattu is to be conducted with customary fervour with all necessary safeguards – CM to PM.

— AIADMK (@AIADMKOfficial) January 21, 2017
ಪನ್ನೀರ್ ಸೆಲ್ವಂ ಅವರು ನಾಳೆ 10 ಗಂಟೆಗೆ ಮದುರೈಯ ಅಳಂಗನಲ್ಲೂರ್‍ ನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಉದ್ಘಾಟಿಸಲಿದ್ದಾರೆ.

Jallikattu Ordinance cleared by Tamil Nadu Government #JallikattuTomorrow #TrueTamizhanWin

— AIADMK (@AIADMKOfficial) January 21, 2017
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಡೆಯಲು ಅವಕಾಶ ನೀಡಿರುವುದಕ್ಕಾಗಿ ನಮ್ಮ ಸರ್ಕಾರ ಮತ್ತು ಜನತೆಯ ಪರವಾಗಿ ನಿಮಗೆ ಧನ್ಯವಾದ ಎಂದು ಪನ್ನೀರ್ ಸೆಲ್ವಂ ರಾಜ್ಯಪಾಲರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಈಗಾಗಲೇ ತಮಿಳುನಾಡು ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ಕರಡುವಿಗೆ ಕೇಂದ್ರ ಪರಿಸರ ಮತ್ತು ಕಾನೂನು ಸಚಿವಾಲಯ ಯಾವುದೇ ಬದಲಾವಣೆ ಸೂಚಿಸದೆ ಒಪ್ಪಿಗೆ ನೀಡಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ಪಟ್ಟಿಯಿಂದ ಗೂಳಿಯನ್ನು ಕೈಬಿಡುವುದು ಸುಗ್ರೀವಾಜ್ಞೆಯಲ್ಲಿರುವ ಮುಖ್ಯ ಅಂಶವಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ನಿರ್ಬಂಧಗಳನ್ನೆಲ್ಲ ಸೇರಿಸಿಕೊಂಡೇ ಸುಗ್ರೀವಾಜ್ಞೆಯ ಕರಡು ಸಿದ್ಧಪಡಿಸಲಾಗಿತ್ತು.

Comments are closed.