
ನವದೆಹಲಿ: ಸಾಮಾಜಿಕ ಜಾಲತಾಣಗಳ ಖಾಸಗಿ ಕಾಯ್ದೆಗೆ ಕಡಿವಾಣ ಹಾಕಿ, ವಾಣಿಜ್ಯ ಶೋಷಣೆ ತಡೆಗಟ್ಟಲು ಸಲ್ಲಿಸಿರುವ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸರ್ಕಾರ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ತಮ್ಮ ಅಭಿಪ್ರಾಯ ಮಂಡಿಸುವಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ಡಿ.ಎಸ್. ಚಂದ್ರಚೂರ್ ಅವರ ನೇತೃತ್ವದ ಪೀಠ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್‌ಗಳಿಗೂ ತಮ್ಮ ಅಭಿಪ್ರಾಯ ತಿಳಿಸುವಂತೆ ನೋಟಿಸ್ ಜಾರಿಮಾಡಿದೆ.
ಅರ್ಜಿ ವಿಚಾರಣೆಗೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರ ಮಧ್ಯಸ್ಥಿಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ಡಿ.ಎಸ್. ಚಂದ್ರಚೂರ್ ಅವರ ನೇತೃತ್ವದ ಪೀಠ ಮನವಿ ಸಲ್ಲಿಸಿದೆ.
ಸಾಮಾಜಿಕ ಜಾಲತಾಣಗಳು ದೇಶದ 150 ಕೋಟಿ ಜನರ ಆಂತರಿಕ ಸಂಪರ್ಕಕ್ಕೆ ರಾಜಿಯಾಗಬೇಕು. ನಿಯಮ ಉಲ್ಲಂಘಿಸಿರುವ ಜಾಲತಾಣಗಳು ನಾಗರಿಕರ ಖಾಸಗಿ ಜೀವನಕ್ಕೆ ತಡೆಗೋಡೆಯಾಗಿವೆ. ಇವು ಸಂವಿಧಾನ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಹಿರಿಯ ವಕೀಲ ಹರೀಶ್ ಸಾಲ್ವೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Comments are closed.