
ಬೆಳಗಾವಿ: ಜಿಲ್ಲೆಯಲ್ಲಿ ರೈತರು ಸಾಲಸೋಲ ಮಡಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಬೆಳೆದ ಎಲೆಕೋಸನ್ನು ತಾವೇ ತಮ್ಮ ಕೈಯ್ಯಾರೆ ನಾಶಪಡಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆದಿದ್ದಾರೆ. ನೋಟ್‍ಬ್ಯಾನ್ ಆದ್ ನಂತರ ಪ್ರತಿ ಕೆಜಿಗೆ ಪೈಸೆಯಂತೆ ಎಲೆಕೋಸು ಮಾರಾಟವಾಗುತ್ತಿದೆ. ಇದರಿಂದ ಬೇಸತ್ತ ರೈತರು ಸಾಗಾಣಿಕೆ ವೆಚ್ಚ ಸಹ ಬಾರದ ಬೆಳೆಗಳನ್ನ ಮಾರಾಟ ಮಾಡಿ ಏನು ಪ್ರಯೋಜನ ಅಂತಾ ಹೊಲದಲ್ಲಿಯೇ ತಾವು ಬೆಳೆದ ಬೆಳೆಯನ್ನ ನಾಶಪಡಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಎಲೆಕೋಸು ಬೆಲೆ ದಿಢೀರ್ ಕುಸಿತ ಕಂಡಿದೆ. ಪ್ರತಿ ಕೆಜಿ ಎಲೆಕೋಸಿಗೆ ಕೇವಲ 50 ರಿಂದ 60 ಪೈಸೆಯಿದೆ. ಇದು ಸಾಗಾಣಿಕೆ, ಕಟಾವು ವೆಚ್ಚಕ್ಕೂ ಸರಿಹೋಗಲ್ಲ. ಒಂದು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯಲು 30ರಿಂದ 35ಸಾವಿರ ರೂಪಾಯಿ ಖರ್ಚಾಗುತ್ತೆ. ಈಗಿನ ಬೆಲೆಗೆ ಎಲೆಕೋಸು ಮಾರಾಟ ಮಾಡಿದ್ರೆ ಎಕರೆಗೆ 5 ಸಾವಿರವೂ ಹುಟ್ಟೋದಿಲ್ಲ. ಇದ್ರಿಂದಾಗಿ ರೈತರು ಭಾರೀ ನಷ್ಟಕ್ಕೆ ತುತ್ತಾಗಿದ್ದಾರೆ. ಯಾಕಾದ್ರೂ ನಾವು ಎಲೆಕೋಸು ಬೆಳೆದೆವೋ ಅಂತಾ ಅಲ್ಲಿನ ರೈತರು ಕಣ್ಣೀರು ಹಾಕುತ್ತಿದ್ದಾರೆ. ನೆರವಿಗೆ ಸರ್ಕಾರವನ್ನು ಯಾಚಿಸ್ತಿದ್ದಾರೆ.
ಕೇವಲ ಎಲೆಕೋಸು ಬೆಲೆ ಮಾತ್ರ ಕುಸಿದಿಲ್ಲ. ನೋಟ್ ಬ್ಯಾನ್ ಆದಾಗಿನಿಂದ ಎಲ್ಲ ತರಕಾರಿ ಬೆಲೆಯೂ ಪಾತಳ ಕಂಡಿದ್ದು, ತರಕಾರಿ ಬೆಳೆದ ರೈತರು ತತ್ತರಿಸಿಹೋಗಿದ್ದಾರೆ.
Comments are closed.