ಕರಾವಳಿ

ಮತ್ತೊಮ್ಮೆ ದಾಂಪಾತ್ಯ ಜೀವನಕ್ಕೆ ಕಾಲಿಟ್ಟ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ (ಒಂದು ಕಾಲದ ಭೂಗತ ದೊರೆ) ಮುತ್ತಪ್ಪ ರೈ…

Pinterest LinkedIn Tumblr

muttapa-rai_marriege_1

ಬೆಂಗಳೂರು, ಡಿಸೆಂಬರ್ 20: ಒಂದು ಕಾಲದಲ್ಲಿ ಭೂಗತ ಲೋಕದಲ್ಲಿ ಸುದ್ಧಿ ಮಾಡಿ ಬಳಿಕ ಪಾತಕ ಲೋಕದಿಂದ ಹೊರಬಂದು ಜಯಕರ್ನಾಟಕ ಸಂಘಟನೆಯ ಸ್ಥಾಪನೆಯೊಂದಿಗೆ ತನ್ನದೇ ಆದ ಶೈಲಿಯಲ್ಲಿ ವಿದ್ಯಾವಂತ ಯುವಕರ ತಂಡ ಕಟ್ಟಿಕೊಂಡು ಯುವಕರಲ್ಲಿ ಸ್ಪೂರ್ತಿ ತುಂಬಿ ಸಮಾಜಸೇವೆಯಲ್ಲಿ ತೊಡಗಿಸುವ ಮೂಲಕ ತಾನು ಕೂಡ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಉದ್ಯಮಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮತ್ತೊಮ್ಮೆ ಮದುವೆಯಾಗುವ ಮೂಲಕ ಮತ್ತೆ ಸುದ್ಧಿಯಾಗಿದ್ದಾರೆ.

ಬೆಂಗಳೂರು ಸಮೀಪದ ತಮ್ಮ ಬಿಡದಿಯ ನಿವಾಸದಲ್ಲಿ ಸೋಮವಾರ ನಡೆದ ಸರಳ ವಿವಾಹದಲ್ಲಿ ಸಕಲೇಶಪುರ ಮೂಲದ ಅನುರಾಧ ಎಂಬವರನ್ನು ವರಿಸುವ ಮೂಲಕ ಮುತ್ತಪ್ಪ ರೈ ಅವರು ಮತ್ತೊಮ್ಮೆ ದಾಂಪಾತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

muttapa-rai_marriege_2

ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮುತ್ತಪ್ಪ ರೈ ಹಾಗೂ ಅನುರಾಧಾರನ್ನು ಹರಸಲು ರೈ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

2013 ಏಪ್ರಿಲ್ 28ರಂದು ಸಿಂಗಾಪುರದಲ್ಲಿ ರೈ ಅವರ ಮೊದಲ ಪತ್ನಿ ರೇಖಾ ರೈ ನಿಧನರಾಗಿದ್ದರು. ರೈ ಅವರಿಗೆ ರಾಕಿ, ರಿಕ್ಕಿ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

muttapa-rai_marriege_3

ಸಕಲೇಶಪುರ ಮೂಲದ ಅನುರಾಧ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಉದ್ಯಮಿಯಾಗಿರುವ ಅನುರಾಧ ಮತ್ತು ಮುತ್ತಪ್ಪ ರೈ ಮಧ್ಯೆ ಹಲವು ವರ್ಷಗಳ ಪರಿಚಯವಿತ್ತು. ರೈ ಮೊದಲ ಪತ್ನಿ ರೇಖಾ ಅವರ ನಿಧನದ ಬಳಿಕ ಇವರಿಬ್ಬರ ಆತ್ಮೀಯತೆ ಹೆಚ್ಚಾಗಿ, ಇದೀಗ ಅ ಅತ್ಮೀಯತೆ ಸತಿಪತಿಗಳಾಗಿ ಪರಿವರ್ತನೆಗೊಂಡಿದೆ

Comments are closed.