ಕರಾವಳಿ

ಉಡುಪಿಯಲ್ಲಿ ಇನ್ನಿಲ್ಲ ಮಡೆ ಸ್ನಾನ; ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಯಡೆಸ್ನಾನ..!

Pinterest LinkedIn Tumblr

ಉಡುಪಿ: ಚಂಪಾ ಷಷ್ಟಿಯಂದು ನಾಗ ದೇವರ ಸನ್ನಿದಿಯಲ್ಲಿ ವಿಶಿಷ್ಟ ಸಂಪ್ರದಾಯವೊಂದು ನಡೆಯುತ್ತದೆ. ಅದರಲ್ಲೂ ಕರವಾಳಿ ಜಿಲ್ಲೆಯಾದ ಮಂಗಳೂರು ಮತ್ತು ಉಡುಪಿಯಲ್ಲಿ ಈ ಆಚರಣೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದ್ರೆ ಈ ಸಂಪ್ರದಾಯಕ್ಕೆ ಕೋರ್ಟ್ ನಿರ್ಬಂಧ ಹೇರಿದೆ.ಆದ್ರೂ ಕೂಡಾ ಉಡುಪಿಯಲ್ಲಿ ಈ ಸಂಪ್ರದಾಯಕ್ಕೂ ಧಕ್ಕೆ ಬಾರದೇ, ಕೋರ್ಟ್ ಆದೇಶಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಸಂಪ್ರದಾಯ ಮುಂದುವರೆಸಲಾಗುತ್ತಿದೆ. ಹಾಗಾದರೆ ಏನಿದು ಸಂಪ್ರದಾಯ?, ಇದರ ವಿಶೇಷತೆ ಏನು? ಇದರ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ..

udupi_shri-krishna-mutt_yade-snana-6 udupi_shri-krishna-mutt_yade-snana-9 udupi_shri-krishna-mutt_yade-snana-4 udupi_shri-krishna-mutt_yade-snana-5 udupi_shri-krishna-mutt_yade-snana-7 udupi_shri-krishna-mutt_yade-snana-8 udupi_shri-krishna-mutt_yade-snana-3 udupi_shri-krishna-mutt_yade-snana-2 udupi_shri-krishna-mutt_yade-snana-1

ಚಂಪಾ ಷಷ್ಠಿ ಮಹೋತ್ಸವ ಕರಾವಳಿ ಭಾಗದಲ್ಲಿ ಅದ್ದೂರಿ ಹಾಗೂ ಭಕ್ತಿಯಿಂದ ನಡೆಯುತ್ತದೆ. ತುಳುನಾಡು ನಾಗದೇವರ ಸೃಷ್ಟಿ ಎಂಬ ಪ್ರತೀತಿ ಇದೆ. ಅದ್ದರಿಂದ ಇಲ್ಲಿ ನಾಗದೇವರನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಚಂಪಾ ಷಷ್ಟಿಯಂದು ನಾಗದೇವರಿಗೆ ವಿಶೇಷ ಪೂಜೆ, ರಥೋತ್ಸವಗಳು ನಡೆಯುತ್ತದೆ. ಮಾತ್ರವಲ್ಲ ಈ ಚಂಪಾ ಷಷ್ಟಿಯಂದು ನಡೆಯುವ ವಿಶಿಷ್ಟ ಸಂಪ್ರದಾಯವೇ ಮಡೆಸ್ನಾನ…. ಮಡೆಸ್ನಾನ ಅಂದ್ರೆ ಬ್ರಾಹ್ಮಣರು ಊಟ ಮಾಡಿದ ಎಂಜಿಲೆಯಲ್ಲಿ ಉರುಳುಸೇವೆ ನಡೆಸುವುದಾಗಿದೆ. ಈ ರೀತಿ ಉರುಳುಸೇವೆ ನಡೆಸಿದರೆ ಚರ್ಮ ರೋಗ ನಿವಾರಣೆ ಆಗುತ್ತದೆ ಎಂಬ ನಂಬಿಕೆಯಿಂದ ಈ ಆಚರಣೆ ಕಳೆದ ಹಲವು ದಶಕಗಳಿಂದ ಕರಾವಳಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಆದ್ರೆ ಈ ಬಾರಿ ಮಾತ್ರ ನಡೆದದ್ದು ಮಡೆಸ್ನಾನ ಅಲ್ಲ ಬದಲಾಗಿ ಎಡೆಸ್ನಾನ..

ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿದಾನದಲ್ಲಿ ನಡೆಯುವ ಮಡೆಮಡೆ ಸ್ನಾನಕ್ಕೆ ಅನೇಕ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಇದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿ ಇಂತಹ ಮೌಡ್ಯ ಪದ್ದತಿಯನ್ನು ನಿಷೇದಿಸಬೇಕು ಎಂದು ಹಲವು ಸಂಘಟನೆಗಳು ಸರಕಾರಕ್ಕೆ ಒತ್ತಾಯಿಸಿದ್ದರು. ಮಾತ್ರ ಅಲ್ಲ ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಕೂಡಾ ಹೂಡಲಾಗಿತ್ತು. ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮಡೆ ಸ್ನಾನ ನಿಷೇಧದ ಬಗ್ಗೆ ಅಫಿದಾವಿತ್ ಕೂಡಾ ಸಲ್ಲಿಸಿತ್ತು. ಈ ಬಗ್ಗೆ ವಿಚಾರ ನಡೆಸಿದ ಸರ್ವೋಚ್ಚ ನ್ಯಾಯಾಲಯ ಮಡೆಸ್ನಾನ ನಡೆಸಬಾರದು ಎಂದು ಆದೇಶ ನೀಡಿತ್ತು. ಉಡುಪಿಯಲ್ಲಿ ನಡೆಯುತ್ತಿದ್ದ ಮಡೆಸ್ನಾನಕ್ಕೆ ಪೇಜಾವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು. ಮಾತ್ರ ಅಲ್ಲ ತನ್ನ ಐತಿಹಾಸಿಕ ಪರ್ಯಾಯ ಮಹೋತ್ಸವದ ಸಂದರ್ಬದಲ್ಲಿ ಮಡೆಸ್ನಾನ ಮಾಡೋದಿಲ್ಲ ಬದಲಾಗಿ ಸಂಪ್ರದಾಯಿಕವಾಗಿ ಯಡೆಸ್ನಾನ ಮಾಡಲಾಗುವುದು ಎಂದು ಹೇಳಿದ್ದರು. ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ಯಡೆಸ್ನಾನ ನಡೆಯಿತು. ಬಾಳೆ ಎಳೆಯಲ್ಲಿ ಖಾದ್ಯಗಳನ್ನು ಬಡಿಸಿ ಅದರಲ್ಲಿ ಬ್ರಾಹ್ಮಣರು ಉರುಳುಸೇವೆಯನ್ನು ನಡೆಸಿದರು. ಈ ಮೂಲಕ ಕೃಷ್ಣ ಮಠದಲ್ಲಿ ಐತಿಹಾಸಿಕ ನಿರ್ದಾರವನ್ನು ತಳೆದು ಪೇಜಾವರ ಶ್ರೀಗಳು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಒಟ್ಟಿನಲ್ಲಿ ಮಡೆಸ್ನಾನ ಬದಲಿಗೆ ಯಡೆಸ್ನಾನ ನಡೆದಿದೆ. ಏಳು ಭಕ್ತರು ಬಡಿಸಿದ ಎಳೆಯಲ್ಲಿ ಉರುಳುಸೇವೆಯನ್ನು ನಡೆಸಿದ್ದಾರೆ. ಈ ಮೂಲಕ ಮಡೆಸ್ನಾನಕ್ಕೆ ಪೇಜಾವರ ಶ್ರೀಗಳೇ ಬ್ರೇಕ್ ಹಾಕಿದ್ದಾರೆ. ಯಾವತೂ ಮಡೆಸ್ನಾನ ನಡೆಯಬಾರದು ಎಂದು ಹೇಳಿದ್ದಾರೆ. ಈ ಮೂಲಕ ಮಠದಲ್ಲಿ ಇನ್ನು ಮುಂದೆ ಯಡೆಸ್ನಾನ ಸಂಪ್ರದಾಯ ನಡೆಯಲಿದೆ. ಈ ಮೂಲಕ ಕೋರ್ಟ್ ಆದೇಶನೂ ಪಾಲನೆಯಾಗಲಿದೆ.

Comments are closed.